8th ಸೆಮ್,ಕೊನೆಯ ಸೆಮ್.. So ಕೊನೆಯ ಬಾರಿಗೆ Class trip ಅನ್ನೋ ಆಸೆ,ತವಕ ಎಲ್ಲರನ್ನೂ ಕಾಡ್ತಾ ಇತ್ತು. ನಾವು ಮುನ್ನಾರಿಗೇ ಹೋಗೋದು ಅಂತ ಮುಂಚೆನೇ ನಿರ್ಧಾರ ಆಗಿದ್ರೂ ಸರಿಯಾದ ಸಮಯದ ಅಭಾವ ,AMC ಕೊಡ್ತಿದ್ದ Attendance ಕಾಟ ಇದ್ ಎಲ್ಲದರಿಂದ ನಮ್ ಪ್ಲಾನು postpone ಆಗ್ತಾನೆ ಇತ್ತು. ಅಂತೂ ಇಂತೂ ಕೊನೆಗೆ 20,21,22 ಮೂರು ದಿನಗಳ ಕಾಲ ತಿರ್ಗಾಡಿ ಬರದು ಅಂತ ಡಿಸೈಡ್ ಮಾಡಿದ್ವಿ .ಆದ್ರೆ ಮತ್ತೆ ಬಂದ ಕೆಲವು ಅಡಚಣೆಗಳಿಂದ ಅದ್ನ 2 ದಿನಕ್ಕೆ ಇಳ್ಸಿದ್ವಿ. 35-40 ಜನ ಬರ್ತಾರೆ ಅನ್ಕೊಂಡಿದ್ ನಮಗೆ ಕೊನೆಗೆ 23 ಜನ ರೆಡಿ ಆದಾಗ ಒಂದ್ ತರಾ ಬೇಜಾರು. Z+ ಸೆಕ್ಯೂರಿಟಿಯ ಆಶ್ವಾಸನೆ ಕೊಟ್ ಮೇಲೂ ಬರೀ 7 ಜನ ಹುಡ್ಗೀರ್ ಹೊರಟ್ರು. Whatever,ನಾವು ಟ್ರಿಪ್ ಹೋಗ್ತಾ ಇದಿವಿ ಅಂತ ಖುಷಿ ಅ ಬೇಜಾರನ್ನ ಮರ್ಸಿತ್ತು. 20th 6 ಘಂಟೆ ಸರಿಯಾಗಿ ನಮ್ ಬಸ್ಸು ಮೈಸೂರ್ ಬಿಟ್ಟಿದ್ದೇ ತಡ ನಾವ್ ಎಲ್ಲಾ ಕಿರ್ಚಾಡ್ತಾ ,ಹಾಡ್ತಾ ,ಕುಣಿತಾ ಮಾಡಕ್ಕೆ ಶುರು ಮಾಡಿದ್ವಿ :)Dumb chardes ಆಟನೂ ಆಡ್ತಾ ಇದ್ವಿ. Kwotereshiya ಕನಸುಗಳು ಚಿತ್ರನ ಆಕ್ಟ್ ಮಾಡಕೆ ಸಾಕ ಆಗ್ ಹೋಯ್ತು ನಂಗೆ!(ಹೆಂಗ್ ತೋರ್ಸ್ಬಹುದು ಅಂತ ನಿಮಗೆ ಗೊತ್ತಾದ್ರೆ ಹೇಳಿ pls) ಗುಂಡ್ಲುಪೇಟೆಲಿ ಊಟ.ಅದ್ ಆದ ಮೇಲೆ ಬಸ್ಸು GOD's OWN COUNTRY ಕಡೆಗೆ ಪ್ರಯಾಣ ಶುರು ಮಾಡ್ತು.
ನಿದ್ರೆಮಾಡಿದನಂಗೆಬೆಳಗ್ಗೆ 6 ಘಂಟೆಹಂಗೆಒಂದ್ pit stop ಕೊಟ್ಟಾಗ್ಲೇಎಚ್ರ. ಸಕತ್ಆಗಿತ್ತುಆಜಾಗ!ಮಳೆನಿಂತ್ಹೋಗಿತಂಪಾಗಿತ್ತು.ಒಂದ್ಇಷ್ಟ್ಫೋಟೋಸ್ತೆಗದುಹೊರಟ್ವಿ . ಅಲ್ಲಿಂದಮುನ್ನಾರ್ 60 kms.. ದಾರಿ super ಆಗಿತ್ತು . ಎಲ್ಲಿನೋಡಿದ್ರುಬೆಟ್ಟ ,ಗುಡ್ಡ,ಟೀಎಸ್ಟೇಟ್ ,GREEN! ಬೇಸಗೆಶೆಕೆಲಿಬೇಯ್ತಿದ್ನಮಗೆಆವೆದರ್ತುಂಬಾಚೆನ್ನಾಗ್ಅನ್ಸ್ತು. ಪ್ರಕೃತಿಮಾತೆಯಆಸೊಬಗನ್ನು ,ಕಣ್ಣಿಗೆಮುದನೀಡ್ತಿದ್ದಆವರ್ಣವೈಭವನನೋಡ್ತಾನೋಡ್ತಾಮುನ್ನಾರ್ತಲ್ಪಿದ್ದೆಗೊತ್ತಾಗ್ಲಿಲ್ಲ .ಮುಂಜಾನೆಯಚುಮುಚುಮುಚಳಿ , ಆಗತಾನೇಹುಟ್ತಾಇದ್ದಸೂರ್ಯನಎಳೆಬಿಸಿಲು, ಅದಕ್ಕೆಕರಗ್ತಾಇದ್ದಮಂಜು ಇದ್ನೆಲ್ಲ ನೋಡಿ ಎಲ್ಲರೂಮೂಕವಿಸ್ಮಿತರಾಗಿದ್ರು!
ಅಲ್ಲಿಒಂದು cottage ನಬುಕ್ಮಾಡಿಎಲ್ಲರೆಡಿಆಗೋವಾಗನಮ್ಮನ್ನು LTTE suspects ಅಂತಪೋಲಿಸ್ಮಾವಂದಿರುಬಂದ್ಹಿಡ್ಕೊಂದಿದ್ಕತೆ[The Unusual Suspects;)] ಒಂದು great experience :) ಶ್ರೀಲಂಕಾದಿಂದ LTTE ಜನತಪ್ಸ್ಕೊಂದಿದಾರೆಅಂತಅವ್ರಿಗೆ news ಇತ್ತಂತೆ!cottage alli ಗಲಾಟೆಮಾಡ್ತಿದ್ನಮ್ನಬಂದುನಾವೇಪ್ರಭಾಕರನ್ಚೇಲಾಗಳುಅಂತಹಿಡ್ಕೊಂಡ್ಬಿಟ್ರು !ಒಂದ್ಘಂಟೆರಗಳೆಮಾಡಿಒಂದ್ಗ್ರೂಪ್ಫೋಟೋತೆಗೊಂಡುಕೊನೆಗೂಬಿಟ್ರು :)[ಕೈಗೆ Slate ಒಂದ್ಕೊಡ್ಲಿಲ್ಲ! ]
TOP STATiON ನಾವ್ಹೋಗಿದ್ಫಸ್ಟ್ಜಾಗ !ಮುನ್ನಾರ್ಇಂದ 35 km ದೂರದಲ್ಲಿದೆ . ಇದು ತಮಿಳು ನಾಡು -ಕೇರಳ ಬಾರ್ಡರ್ ಅಲ್ಲಿದೆ.Again ,the scenery was amazing :) ಹೋದಂತೆಕಾಣೋರಸ್ತೆಗಳು, ಟೀಚಿಗುರನ್ನಕೀಳೋಆಂಟೀರು,ಫ್ರೆಶ್ಕ್ಯಾರೆಟ್/ಮಾವಿನಕಾಯಿಮಾರೋಗೂಡ್ಅಂಗಡಿಗಳು,ಸೂರ್ಯನಜೊತೆಆಡೋಮೋಡಗಳುಇದೆಲ್ಲಅಲ್ಲಿಸಾಮಾನ್ಯದೃಶ್ಯಗಳು!ಟಾಪ್ ಸ್ಟೇಷನ್ ಇಂದ ನಾವು ಸುಮಾರು 300 ಡಿಗ್ರಿ view ನೋಡಬಹುದು.ದೂರದ ಬೆಟ್ಟದ ಮೇಲಿನ ಮನೆ, zig zag roads,ಕೆಳಗಿನ ಪ್ರಪಾತ ನೋಡಲು wonderful:)
ನಮ್ಮ ಮುಂದಿನ ತಾಣ 'ECHO POINT' .ಮುನ್ನಾರಿಂದ 15 km.ಇಲ್ಲಿನ ಕಣಿವೆಯ ನಡುವೆ ಹರಿಯುವ ನದಿ ಸುಂದರ ವಾತಾವರಣನ ನಿರ್ಮಿಸಿದೆ.ನಮ್ಮ ಧ್ವನಿ ದೂರದ ಕಣಿವೆಯಲ್ಲಿ ಪ್ರತಿಧ್ವನಿಯಾಗಿ ಮೊಳಗಿದಾಗ ರೋಮಾಂಚನವಾಗತ್ತೆ. ಹಚ್ಚ ಹಸುರಿನ ಬಯಲು ,ದೂರದ ಕಾಡಿನಿಂದ ಬರೋ ತಾಜಾ ಗಾಳಿ,ಇವನ್ನು ಸವಿಯುತ್ತ ನಿಂತ ಜನ -ಇವೆಲ್ಲವೂ ನಮ್ನ ಆ ಮಾಯಾಜಾಲದಲ್ಲಿ ಬಂದಿಸುತ್ತೆ.
ಸಂಜೆ ತಿಂಡಿ ಕಾಫಿ ಮುಗಿಸಿ ಅಲೆಪ್ಪಿ ಯ ಕಡೆಗೆ ನಮ್ಮ ಯಾನವನ್ನು ಮುಂದುವರ್ಸಿದ್ವಿ ಮಲಯಾಳಂ ನಮ್ಮಲ್ಲಿ ಯಾರಗೂ ಬರ್ತಾ ಇರ್ಲಿಲ್ಲ . So communicationದು ದೊಡ್ ಪ್ರಾಬ್ಲಮ್ .ಅಲ್ಲಿನ ಊಟ ಕೂಡ ಅಷ್ಟೊಂದು ಸರಿ ಇರ್ಲಿಲ್ಲ! Sharjah milkshake (ಹಾಲು+ಬಾಳೆಹಣ್ಣು+ ಐಸ್ ಕ್ರೀಂ +ಬೂಸ್ಟ್ )ಮಾತ್ರ ಸಕತ್ ಆಗಿತ್ತು. ಅಲೆಪ್ಪಿಲಿ ತಲ್ಪೋವಾಗ 12. ಅಲ್ಲೇ ನಮ್ stay.
ಮರುದಿನ ಬೆಳ್ಗೆ ಅಪ್ಪಂ ತಿಂದು 3 ಘಂಟೆ Boat House rideಗೆ ರೆಡಿ ಆದ್ವಿ .ಕೇರಳ backwaters ನ ಫೋಟೋಗಳಲ್ಲಿ ನೋಡಿದ್ದ ನಮ್ಗೆ ಅದ್ನ ನಿಜವಾಗಿ ನೋಡ್ತಾ ಇದಿವಿ ಅಂತ ಖುಷಿ ಆಗಿತ್ತು.ಆ ಮೂರುಘಂಟೆ ಪ್ರಯಾಣ ವರ್ಣನಾತೀತ. ದೋಣಿ ಮನೆಗಳು ,ನೀರಿಗೆ ಮುತ್ತಿಡಲು ಬಾಗಿದ ತೆಂಗಿನ ಮರಗಳು,ದೋಣಿಗಾಗಿ ಕಾಯ್ತಾ ಇರೋ ಜನಗಳು, ನಮ್ಮಂತೆ ಆ ಸವಿಯನ್ನು ಸವಿತಾ ಇರೋ ಪ್ರವಾಸಿಗರು,Lake ಪ್ಯಾಲೇಸ್ ಇವು ಅಲ್ಲಿನ ಆಕರ್ಷಣೆಗಳು.ಅಲ್ಲಿನ ಜನಕ್ಕೆ ಇವು ಸಾಮನ್ಯ ಅನಿಸಿದ್ರೂ, ಪ್ರಕೃತಿ ಮಾತೆಯ ಆರಾಧಕನಿಗೆ ಅದು ನಿತ್ಯ ನೂತನ .
ಅಲ್ಲಿಂದ ನಮ್ಮ ಪಯಣ ಅಲ್ಲೆಪ್ಪಿ ಕಡಲ ತೀರಕ್ಕೆ. ಬಿಸಿಲಿನ ಆರ್ಭಟ ಜೋರಾಗೇ ಇತ್ತು.ಹಾಗೆ ಸಮುದ್ರದಲ್ಲಿ ಅಲೆಗಳ ಆರ್ಭಟನೂ ಬಹಳ ಜೋರ ಇತ್ತು .ಅಲೆಗಳು, ಅಡ್ಡ ಬಂದ ಏನನ್ನಾದರೂ ಕೊಚ್ಚಿಕೊಂಡು ಹೋಗಿ ಬಿಡುವ ಹುಮ್ಮಸಿನಲ್ಲಿತ್ತು!ಉಪ್ಪು ನೀರನ್ನ ಹಲವರು ಹಲವಾರು ಬಾರಿ ಕುಡಿಬೇಕಾಯ್ತು!
ಅಲ್ಲಿಂದ ಹೊರಡೋವಾಗ ಏನೋ ಬೇಸರ !ಮುಗ್ದ್ ಹೊಯ್ತಲ್ವಾ ಟ್ರಿಪು, ಇನ್ನು ಮುಂದೆ class ಟ್ರಿಪ್ ಅಂತ ಇರಲ್ಲ ಅಂತ :(ಆದ್ರೆ ಈ ಪ್ರವಾಸದ ಸವಿ ನೆನಪುಗಳನ್ನ ನಮ್ಮ ನೆನಪಿನ ಪಾಕೆಟ್ ಅಲ್ಲಿ ತುಂಬಿಸಿಕೊಂಡು,ಅದ್ರ ಮೆಲುಕು ಹಾಕ್ತಾ ಖುಷಿ ಪಡೋದು ಇದ್ದೆ ಇದೆ ಅಲ್ವಾ?:)