Thursday, April 30, 2009

ದೇವರ ಸ್ವಂತ ಊರಿಗೊಂದು ಪಯಣ ;)


8th ಸೆಮ್,ಕೊನೆಯ ಸೆಮ್.. So ಕೊನೆಯ ಬಾರಿಗೆ Class trip ಅನ್ನೋ ಆಸೆ,ತವಕ ಎಲ್ಲರನ್ನೂ ಕಾಡ್ತಾ ಇತ್ತು. ನಾವು ಮುನ್ನಾರಿಗೇ ಹೋಗೋದು ಅಂತ ಮುಂಚೆನೇ ನಿರ್ಧಾರ ಆಗಿದ್ರೂ ಸರಿಯಾದ ಸಮಯದ ಅಭಾವ ,AMC ಕೊಡ್ತಿದ್ದ Attendance ಕಾಟ ಇದ್ ಎಲ್ಲದರಿಂದ ನಮ್ ಪ್ಲಾನು postpone ಆಗ್ತಾನೆ ಇತ್ತು. ಅಂತೂ ಇಂತೂ ಕೊನೆಗೆ 20,21,22 ಮೂರು ದಿನಗಳ ಕಾಲ ತಿರ್ಗಾಡಿ ಬರದು ಅಂತ ಡಿಸೈಡ್ ಮಾಡಿದ್ವಿ .ಆದ್ರೆ ಮತ್ತೆ ಬಂದ ಕೆಲವು ಅಡಚಣೆಗಳಿಂದ ಅದ್ನ 2 ದಿನಕ್ಕೆ ಇಳ್ಸಿದ್ವಿ. 35-40 ಜನ ಬರ್ತಾರೆ ಅನ್ಕೊಂಡಿದ್ ನಮಗೆ ಕೊನೆಗೆ 23 ಜನ ರೆಡಿ ಆದಾಗ ಒಂದ್ ತರಾ ಬೇಜಾರು. Z+ ಸೆಕ್ಯೂರಿಟಿಯ ಆಶ್ವಾಸನೆ ಕೊಟ್ ಮೇಲೂ ಬರೀ 7 ಜನ ಹುಡ್ಗೀರ್ ಹೊರಟ್ರು. Whatever,ನಾವು ಟ್ರಿಪ್ ಹೋಗ್ತಾ ಇದಿವಿ ಅಂತ ಖುಷಿ ಅ ಬೇಜಾರನ್ನ ಮರ್ಸಿತ್ತು. 20th 6 ಘಂಟೆ ಸರಿಯಾಗಿ ನಮ್ ಬಸ್ಸು ಮೈಸೂರ್ ಬಿಟ್ಟಿದ್ದೇ ತಡ ನಾವ್ ಎಲ್ಲಾ ಕಿರ್ಚಾಡ್ತಾ ,ಹಾಡ್ತಾ ,ಕುಣಿತಾ ಮಾಡಕ್ಕೆ ಶುರು ಮಾಡಿದ್ವಿ :)Dumb chardes ಆಟನೂ ಆಡ್ತಾ ಇದ್ವಿ. Kwotereshiya ಕನಸುಗಳು ಚಿತ್ರನ ಆಕ್ಟ್ ಮಾಡಕೆ ಸಾಕ ಆಗ್ ಹೋಯ್ತು ನಂಗೆ!(ಹೆಂಗ್ ತೋರ್ಸ್ಬಹುದು ಅಂತ ನಿಮಗೆ ಗೊತ್ತಾದ್ರೆ ಹೇಳಿ pls) ಗುಂಡ್ಲುಪೇಟೆಲಿ ಊಟ.ಅದ್ ಆದ ಮೇಲೆ ಬಸ್ಸು GOD's OWN COUNTRY ಕಡೆಗೆ ಪ್ರಯಾಣ ಶುರು ಮಾಡ್ತು.
ನಿದ್ರೆ ಮಾಡಿದ ನಂಗೆ ಬೆಳಗ್ಗೆ 6 ಘಂಟೆ ಹಂಗೆ ಒಂದ್ pit stop ಕೊಟ್ಟಾಗ್ಲೇ ಎಚ್ರ. ಸಕತ್ ಆಗಿತ್ತು ಜಾಗ!ಮಳೆ ನಿಂತ್ ಹೋಗಿ ತಂಪಾಗಿತ್ತು.ಒಂದ್ ಇಷ್ಟ್ ಫೋಟೋಸ್ ತೆಗದು ಹೊರಟ್ವಿ . ಅಲ್ಲಿಂದ ಮುನ್ನಾರ್ 60 kms.. ದಾರಿ super ಆಗಿತ್ತು . ಎಲ್ಲಿ ನೋಡಿದ್ರು ಬೆಟ್ಟ ,ಗುಡ್ಡ,ಟೀ ಎಸ್ಟೇಟ್ ,GREEN!

ಬೇಸಗೆ ಶೆಕೆಲಿ ಬೇಯ್ತಿದ್ ನಮಗೆ ವೆದರ್ ತುಂಬಾ ಚೆನ್ನಾಗ್ ಅನ್ಸ್ತು. ಪ್ರಕೃತಿ ಮಾತೆಯ ಸೊಬಗನ್ನು ,ಕಣ್ಣಿಗೆ ಮುದ ನೀಡ್ತಿದ್ದ ವರ್ಣ ವೈಭವನ ನೋಡ್ತಾ ನೋಡ್ತಾ ಮುನ್ನಾರ್ ತಲ್ಪಿದ್ದೆ ಗೊತ್ತಾಗ್ಲಿಲ್ಲ .ಮುಂಜಾನೆಯ ಚುಮು ಚುಮು ಚಳಿ , ಆಗ ತಾನೇ ಹುಟ್ತಾ ಇದ್ದ ಸೂ ರ್ಯನ ಎಳೆ ಬಿಸಿಲು, ಅದಕ್ಕೆ ಕರಗ್ತಾ ಇದ್ದ ಮಂಜು ಇದ್ನೆಲ್ಲ ನೋಡಿ ಎಲ್ಲರೂ ಮೂಕವಿಸ್ಮಿತರಾಗಿದ್ರು!



ಅಲ್ಲಿ ಒಂದು cottage ಬುಕ್ ಮಾಡಿ ಎಲ್ಲ ರೆಡಿ ಆಗೋವಾಗ ನಮ್ಮನ್ನು LTTE suspects ಅಂತ ಪೋಲಿಸ್ ಮಾವಂದಿರು ಬಂದ್ ಹಿಡ್ಕೊಂದಿದ್ ಕತೆ[The Unusual Suspects;)] ಒಂದು great experience :) ಶ್ರೀಲಂಕಾದಿಂದ LTTE ಜನ ತಪ್ಸ್ಕೊಂದಿದಾರೆ ಅಂತ ಅವ್ರಿಗೆ news ಇತ್ತಂತೆ!cottage alli ಗಲಾಟೆ ಮಾಡ್ತಿದ್ ನಮ್ನ ಬಂದು ನಾವೇ ಪ್ರಭಾಕರನ್ ಚೇಲಾಗಳು ಅಂತ ಹಿಡ್ಕೊಂಡ್ಬಿಟ್ರು !ಒಂದ್ ಘಂಟೆ ರಗಳೆ ಮಾಡಿ ಒಂದ್ ಗ್ರೂಪ್ ಫೋಟೋ ತೆಗೊಂಡು ಕೊನೆಗೂ ಬಿಟ್ರು :)[ಕೈಗೆ Slate ಒಂದ್ ಕೊಡ್ಲಿಲ್ಲ! ]



TOP STATiON ನಾವ್ ಹೋಗಿದ್ ಫಸ್ಟ್ ಜಾಗ !ಮುನ್ನಾರ್ ಇಂದ 35 km ದೂರದಲ್ಲಿದೆ . ಇದು ತಮಿಳು ನಾಡು -ಕೇರಳ ಬಾರ್ಡರ್ ಅಲ್ಲಿದೆ.Again ,the scenery was amazing :) ಹೋದಂತೆ ಕಾಣೋ ರಸ್ತೆಗಳು, ಟೀ ಚಿಗುರನ್ನ ಕೀಳೋ ಆಂಟೀರು,ಫ್ರೆಶ್ ಕ್ಯಾರೆಟ್/ಮಾವಿನ ಕಾಯಿ ಮಾರೋ ಗೂಡ್ ಅಂಗಡಿಗಳು,ಸೂರ್ಯ ಜೊತೆ ಆಡೋ ಮೋಡಗಳು ಇದೆಲ್ಲ ಅಲ್ಲಿ ಸಾಮಾನ್ಯ ದೃಶ್ಯಗಳು!ಟಾಪ್ ಸ್ಟೇಷನ್ ಇಂದ ನಾವು ಸುಮಾರು 300 ಡಿಗ್ರಿ view ನೋಡಬಹುದು.ದೂರದ ಬೆಟ್ಟದ ಮೇಲಿನ ಮನೆ, zig zag roads,ಕೆಳಗಿನ ಪ್ರಪಾತ ನೋಡಲು wonderful:)




ನಮ್ಮ ಮುಂದಿನ ತಾಣ 'ECHO POINT' .ಮುನ್ನಾರಿಂದ 15 km.ಇಲ್ಲಿನ ಕಣಿವೆಯ ನಡುವೆ ಹರಿಯುವ ನದಿ ಸುಂದರ ವಾತಾವರಣನ ನಿರ್ಮಿಸಿದೆ.ನಮ್ಮ ಧ್ವನಿ ದೂರದ ಕಣಿವೆಯಲ್ಲಿ ಪ್ರತಿಧ್ವನಿಯಾಗಿ ಮೊಳಗಿದಾಗ ರೋಮಾಂಚನವಾಗತ್ತೆ. ಹಚ್ಚ ಹಸುರಿನ ಬಯಲು ,ದೂರದ ಕಾಡಿನಿಂದ ಬರೋ ತಾಜಾ ಗಾಳಿ,ಇವನ್ನು ಸವಿಯುತ್ತ ನಿಂತ ಜನ -ಇವೆಲ್ಲವೂ ನಮ್ನ ಆ ಮಾಯಾಜಾಲದಲ್ಲಿ ಬಂದಿಸುತ್ತೆ.


ಸಂಜೆ ತಿಂಡಿ ಕಾಫಿ ಮುಗಿಸಿ ಅಲೆಪ್ಪಿ ಯ ಕಡೆಗೆ ನಮ್ಮ ಯಾನವನ್ನು ಮುಂದುವರ್ಸಿದ್ವಿ ಮಲಯಾಳಂ ನಮ್ಮಲ್ಲಿ ಯಾರಗೂ ಬರ್ತಾ ಇರ್ಲಿಲ್ಲ . So communicationದು ದೊಡ್ ಪ್ರಾಬ್ಲಮ್ .ಅಲ್ಲಿನ ಊಟ ಕೂಡ ಅಷ್ಟೊಂದು ಸರಿ ಇರ್ಲಿಲ್ಲ! Sharjah milkshake (ಹಾಲು+ಬಾಳೆಹಣ್ಣು+ ಐಸ್ ಕ್ರೀಂ +ಬೂಸ್ಟ್ )ಮಾತ್ರ ಸಕತ್ ಆಗಿತ್ತು. ಅಲೆಪ್ಪಿಲಿ ತಲ್ಪೋವಾಗ 12. ಅಲ್ಲೇ ನಮ್ stay.


ಮರುದಿನ ಬೆಳ್ಗೆ ಅಪ್ಪಂ ತಿಂದು 3 ಘಂಟೆ Boat House rideಗೆ ರೆಡಿ ಆದ್ವಿ .ಕೇರಳ backwaters ನ ಫೋಟೋಗಳಲ್ಲಿ ನೋಡಿದ್ದ ನಮ್ಗೆ ಅದ್ನ ನಿಜವಾಗಿ ನೋಡ್ತಾ ಇದಿವಿ ಅಂತ ಖುಷಿ ಆಗಿತ್ತು.ಆ ಮೂರುಘಂಟೆ ಪ್ರಯಾಣ ವರ್ಣನಾತೀತ. ದೋಣಿ ಮನೆಗಳು ,ನೀರಿಗೆ ಮುತ್ತಿಡಲು ಬಾಗಿದ ತೆಂಗಿನ ಮರಗಳು,ದೋಣಿಗಾಗಿ ಕಾಯ್ತಾ ಇರೋ ಜನಗಳು, ನಮ್ಮಂತೆ ಆ ಸವಿಯನ್ನು ಸವಿತಾ ಇರೋ ಪ್ರವಾಸಿಗರು,Lake ಪ್ಯಾಲೇಸ್ ಇವು ಅಲ್ಲಿನ ಆಕರ್ಷಣೆಗಳು.ಅಲ್ಲಿನ ಜನಕ್ಕೆ ಇವು ಸಾಮನ್ಯ ಅನಿಸಿದ್ರೂ, ಪ್ರಕೃತಿ ಮಾತೆಯ ಆರಾಧಕನಿಗೆ ಅದು ನಿತ್ಯ ನೂತನ .


ಅಲ್ಲಿಂದ ನಮ್ಮ ಪಯಣ ಅಲ್ಲೆಪ್ಪಿ ಕಡಲ ತೀರಕ್ಕೆ. ಬಿಸಿಲಿನ ಆರ್ಭಟ ಜೋರಾಗೇ ಇತ್ತು.ಹಾಗೆ ಸಮುದ್ರದಲ್ಲಿ ಅಲೆಗಳ ಆರ್ಭಟನೂ ಬಹಳ ಜೋರ ಇತ್ತು .ಅಲೆಗಳು, ಅಡ್ಡ ಬಂದ ಏನನ್ನಾದರೂ ಕೊಚ್ಚಿಕೊಂಡು ಹೋಗಿ ಬಿಡುವ ಹುಮ್ಮಸಿನಲ್ಲಿತ್ತು!ಉಪ್ಪು ನೀರನ್ನ ಹಲವರು ಹಲವಾರು ಬಾರಿ ಕುಡಿಬೇಕಾಯ್ತು!


ಅಲ್ಲಿಂದ ಹೊರಡೋವಾಗ ಏನೋ ಬೇಸರ !ಮುಗ್ದ್ ಹೊಯ್ತಲ್ವಾ ಟ್ರಿಪು, ಇನ್ನು ಮುಂದೆ class ಟ್ರಿಪ್ ಅಂತ ಇರಲ್ಲ ಅಂತ :(ಆದ್ರೆ ಈ ಪ್ರವಾಸದ ಸವಿ ನೆನಪುಗಳನ್ನ ನಮ್ಮ ನೆನಪಿನ ಪಾಕೆಟ್ ಅಲ್ಲಿ ತುಂಬಿಸಿಕೊಂಡು,ಅದ್ರ ಮೆಲುಕು ಹಾಕ್ತಾ ಖುಷಿ ಪಡೋದು ಇದ್ದೆ ಇದೆ ಅಲ್ವಾ?:)


12 comments:

  1. Welcome to Blogger! Wonderful pictures! Happy blogging!

    ReplyDelete
  2. Howdu Mr. Chethan. Munnar matte allepey na nenapugalu sada iruttade(yakandre 8th sem trip alwa!!)
    But hopefully last trip alla. Goa hogona anta tumba aase,so nodona :) nice description lo

    ReplyDelete
  3. ನಿರೂಪಣೆ , ವರ್ಣನೆ, ಚಿತ್ರಗಳು. ಎಲ್ಲವೂ ಚೆನ್ನಾಗಿದೆ :)

    ReplyDelete
  4. ಎಲ್ಲರಿಗೂ ಧನ್ಯವಾದಗಳು :)
    @chaitu : ya man.. hopefully we'll have one more last trip :)

    ReplyDelete
  5. nice one chethu:)

    ReplyDelete
  6. Nice description... :-)
    Ninu varnane madiradna odtha edre aa dinagale nenapagutte....
    aa savi nenapannu marukalisidakke ninage dhanyavadagalu...
    last trip andre bejaragatte...:-(
    ennondu tripge hogona...

    ReplyDelete
  7. Sakkat start Chethu..keep it going man..! voLLe posts barta irli..:)

    ReplyDelete
  8. chetu it wz awesome...u described it really well...n yeah i don wan dis to b de last trip..lets go for another trip prob after exams or so..let dose who cudn mak it to dis one join us...its true tat our CR provided us "Z+" security..

    ReplyDelete
  9. dis wz de best trip i'd ever been...de memories ll remain foreve...

    ReplyDelete
  10. ur description took me 2 kerala once again!! seriously man :)
    this was my first trip wid cls frds.a vry good start :) but hope its not ta last..hey frds, plz plz do plan for one more cool trip :)

    ReplyDelete
  11. Thank you ppl:)I'm glad that all are ready for one more trip:) We'll ask CR and have a trip with more ppl,with more success:)

    ReplyDelete