ಬೆಂಗಳೂರು ಆದ್ ಎಷ್ಟ್ ದೊಡ್ಡ ಇದೆ ಕಣ್ರೀ! ಎಲ್ಲಿ ಹೋದ್ರೂ ಜನ, ಯಾವ್ ಬಸ್ ಹತ್ತಿದ್ರೂ ಜನ! ಕಣ್ ಬಿಟ್ರೆ Vehicles ,ಟ್ರಾಫಿಕ್, ಗದ್ದಲ. ಎಷ್ಟೊಂದು ಶಾಪಿಂಗ್ malls, apartments ,IT ಕಂಪೆನಿಗಳು ! ಕಣ್ಣು ಕೋರೈಸೋ ಬೆಡಗಿಯರು! English ಅಲ್ಲೇ ಜಪ ಮಾಡೋ ಪುಟಾಣಿಗಳು! ಇದೆಲ್ಲದರ ಜೊತೆ ,ಈ ಜನಸಾಗರದಲ್ಲಿ ಒಂದಾಗಿರೋಕೆ ಚೆನ್ನಾಗೇ ಅನ್ಸತ್ತೆ. "ಧೂಳು ಈಗ ಧೂಳಲ್ಲ, ನನಗದೇ ಪುಷ್ಪ ಪರಾಗ ರೇಣು" ಅನ್ನೋ ಕವಿವಾಣಿ ನೆನಪಾಗತ್ತೆ ನಂಗೆ. ಉದ್ಯಾನ ನಗರಿಲಿ ಮರ ಗಿಡಗಳು , ಕರುನಾಡ ಹೃದಯದಲ್ಲಿ ಕನ್ನಡ ಉಳಿದು ಬೆಳೆದರೆ ಸಾಕು ಅನ್ಸತ್ತೆ ಇಲ್ಲಿ. ವೀಕೆಂಡ್ಸ್ ಅಲ್ಲಿ ಈ ಊರು ಬಿಟ್ಟು ಎಲ್ಲಾದ್ರು ಹೋದ್ರೆ ಸಾಕು ಅಂತ ಅನ್ಸುತ್ತಾ ಇರತ್ತೆ! ಸುಮಾರು ಟ್ರಿಪ್ಸ್ ಆಯ್ತು ಇಲ್ಲಿಗೆ ಬಂದ್ ಮೇಲೆ. ಮೇಕೆದಾಟು-ಸಂಗಮ-ಮುತ್ಯಾಲಮಡು, ಸ್ಕಂದಗಿರಿ ( ಮೂನ್ ಲೈಟ್ ಟ್ರೆಕ್ ) , ಸಕಲೆಶಪುರ್ ಗ್ರೀನ್ ರೂಟ್ ಟ್ರೆಕ್ , ಕೆಮ್ಮಣ್ಣುಗುಂಡಿ-ಕುದ್ರೆಮುಖ್-ಮುಳ್ಳಯ್ಯನಗಿರಿ ಎಲ್ಲಾ ನೋಡ್ಕೊಂಡ್ ಬಂದ್ ಆಯ್ತು ! ಮೊನ್ನೆ ಎಲ್ಲಾ ಫ್ರೆಂಡ್ಸ್ ಸೇರಿ ಕೊಡೈಕೆನಾಲ್ ಹೋಗ್ಬೇಕು ಅಂತ ಡಿಸೈಡ್ ಮಾಡಿ ಹೊರಟೆ ಬಿಟ್ವಿ ! ಆ ಟ್ರಿಪ್ ಅನುಭವನ ಸ್ವಲ್ಪ ಹೇಳ್ಕೋ ಬೇಕು ಅಂತ ಈ ಪೋಸ್ಟು!
ಕೊಡೈ is a perfect honeymoon spot! ಬಿರು ಬೇಸಿಗೆಲೂ ತಂಪಾಗಿ ಇರತ್ತೆ ಈ ಊರು. ನೀಲಿ ಬೆಟ್ಟಗಳು ಕಣ್ಣು ಹಾಯಿಸದಷ್ಟು ದೂರಕ್ಕೂ ಕಾಣ್ಸತ್ತೆ! ತಮಿಳ್ ಅಲ್ಲಿ ಕೊಡೈ ಅಂದ್ರೆ "End of the forest " ಅಂತೆ ! ಬೆಂಗಳೂರಿಂದ ಇಲ್ಲಿಗೆ ಸುಮಾರು 450 kms. Road ಮಾತ್ರ ಸೂಪರ್ ! ಆದ್ರೆ ಟೋಲ್ ಫೀ ಕೊಡ್ತಾನೇ ಇರಬೇಕು. ghat section ಶುರು ಆದಮೇಲೆ 90 kms ಜರ್ನಿ ಇದೆ. ಬಯಲಿನ ಬೇಗೆಯಿಂದ ಮಂಜು ಮುಸುಕಿದ ಶಿಕರದೆಡೆಗಿನ ಪಯಣ ರೋಮಾಂಚಕ !
ಈ 2 ದಿನದ ಪ್ರವಾಸದಲ್ಲಿ ನಾವು ಭೇಟಿ ಮಾಡಿದ ಜಾಗಗಳು :
- Silver Cascade ಪಾರ್ಕ್ : ಕೊಡೈ ಇಂದ ಸುಮಾರು 8 kms. enter ಆಗೋವಾಗ ಸಿಗತ್ತೆ ಇದು. 150 ft ಎತ್ತರದಿಂದ ಧುಮುಕುವ ಜಲಧಾರೆ , ಬೆಳ್ಳಿಯಂತೆ ಮಿನುಗುವ ಕಾರಣ ಈ ಹೆಸರು ! It is very badly maintained. ಕೆಳಗಿಳಿದ ನೀರು ಹರಿಯುವಾಗ ಸಮೆ ಕೆಂಗೇರಿ ಮೋರಿ ತರಾ ಕಾಣ್ಸತ್ತೆ ! ತಮಿಳಿಗರು " ಅಪ್ಪಡಿ ಪೋಡ" style ಅಲ್ಲಿ ಫಾಲ್ಸ್ ಎದುರು ಪೋಸ್ ಕೊಡ್ತಾ ಇದ್ದಿದ್ scene ಸೂಪರ್ ಆಗಿತ್ತು.
- ಕೊಡೈ ಲೇಕ್: ಕೊಡೈನ ಹೃದಯ ಭಾಗದಲ್ಲಿ ಇರೋ lake , ಕೊಡೈನ ಪ್ರಮುಖ ಆಕರ್ಷಣೆ . ನಕ್ಷತ್ರಾಕಾರದಲ್ಲಿರೋ ಈ ಮಾನವ ನಿರ್ಮಿತ ಕೆರೆ looks very good. ಕೆರೆಯಲ್ಲಿ boating/rowing , ಕೆರೆಯ ಸುತ್ತ ೫ kms ಸೈಕ್ಲಿಂಗ್ ಮಾಡಬಹುದು. ಬಾಡಿಗೆಗೆ ಸೈಕಲ್ಸ್ ಸುಲಭದಲ್ಲಿ ಸಿಗತ್ತೆ . 20 rs/hr ರೆಂಟ್ . lake ನ ಸುತ್ತ ಟಿಬೆಟಿಯನ್ ಶಾಪಿಂಗ್ ಅಂಗಡಿಗಳು ಇದೆ . ಕುದುರೆ ಸವಾರಿ ಮಾಡೋವ್ರಿಗೆ ಕುದುರೆಗಳು , 80 rs/Km ದರದಲ್ಲಿ ಸಿಗತ್ತೆ.
- Byrant ಪಾರ್ಕ್: lake ಪಕ್ಕನೇ ಇದೆ ಈ ಪಾರ್ಕ್. ಕಲರ್ ಕಲರ್ ಹೂಗಳು , ದೊಡ್ಡ ದೊಡ್ಡ ಮರಗಳು ಇದು ಈ ಪಾರ್ಕಿನ specialities. ಹಾಯಾಗಿ, ತಂಪಾಗಿ ಕೂರೋಕೆ ಒಳ್ಳೆ ಜಾಗ .
- ಪಿಲ್ಲರ್ rocks : ಅಮೃತವರ್ಷಿಣಿ ಸಿನಿಮಾದಲ್ಲಿ ಸುಹಾಸಿನಿ ಆತ್ಮಹತ್ಯೆ ಮಾಡ್ಕೊಳೋ ಜಾಗ . ಕೊಡೈ ನಿಂದ ಸುಮಾರು ೮ kms . ಇಲ್ಲಿಗೆ ಹೋಗೋ ದಾರಿ ನಿಜಕ್ಕೂ ಆಕರ್ಷಕ! ಸುಂದರ ಕಣಿವೆಗಳು, ಅಂಕು ಡೊಂಕು ರಸ್ತೆಗಳು, lake ವೀವ್, ಗಾಲ್ಫ್ ಕೋರ್ಸ್ ಗಳನ್ನ ನಾವು ಕಾಣಬಹುದು. ನಾವು ಹೋದಾಗ ಹಾಲ್ನೊರೆಯ ಮೋಡಗಳ ಕಡಲು , ಈ ಬಂಡೆಯನ್ನ ಚುಂಬಿಸಲು ಹಾತೊರೆದು ಓಡೋಡಿ ಬರ್ತಿತ್ತು! ಮುಂಜಾನೆಯ ಮಂಜು , ಚುಮು ಚುಮು ಚಳಿ , ಹಸಿರು ಹೊದ್ದು ಮಲಗಿದ ಆಳವಾದ ಕಣಿವೆಗಳು ,ಮೋಡದ ಮರೆಯಲ್ಲಿ ಕಣ್ಣ ಮುಚ್ಚಾಲೆ ಆಡುತಿದ್ದ ದಿನಕರ :ಎಲ್ಲವೂ ಆ ದಿನಕ್ಕೆ ಶುಭಾರಂಭವನ್ನು ಕೋರುತ್ತಿತ್ತು :)ಪೈನ್ forests ಗೆ ಹೋಗಿ ಬರೋವಾಗ ಹಿಮಸಾಗರ, ಈ ಬಂಡೆಗಳನ್ನು ಆವರಿಸಿತ್ತು!
- ಪೈನ್ forests : ಗಗನಚುಂಬಿ ಮರಗಳು , ನಾ ಮುಂದು-ತಾ ಮುಂದು ಎಂದು ಪೈಪೋಟಿ ಅಲ್ಲಿ ಬೆಳೆದು ನಿಂತಿವೆ. ಮುಂಜಾನೆಯ ಹಿತಕರ ವಾತವರಣದಲ್ಲಿನ walk , ಮನಸ್ಸಿನ ಎಲ್ಲ ಬೇಸರಗಳನ್ನ ಓಡಿಸಿ, ಹೊಸ ಹುರುಪನ್ನು ತುಂಬತ್ತೆ!
- ಗ್ರೀನ್ Valley View: Suicide ಪಾಯಿಂಟ್ ಅಂತನೂ ಫೇಮಸ್. 750 ft ಆಳದ ಪ್ರಪಾತ ಇದೆ ಅಂತೆ ಇಲ್ಲಿ. ನಾವು ಹೋದಾಗ ಇಡೀ ಕಣಿವೆಯನ್ನು ಮಂಜು ಮುಸುಕಿತ್ತು. ಆ ಮಂಜನ ಗೋಡೆಯನ್ನು ಬಿಟ್ಟು , ಬೇರೇನೂ ಕಾಣ್ಸ್ತಾ ಇರ್ಲಿಲ್ಲ. ಇನ್ನೊಂದೆಡೆ ಬೃಹದಾಕಾರದ ಮರಗಳ ರೇಖಾಕೃತಿ ಮಂಜಿನ ಮುಸುಕಿನಲ್ಲಿ ಗೋಚರಿಸಿತ್ತು. ಬಿಸಿ ಬಿಸಿ ಟೀ ,ಆ ಸಮಯಕ್ಕೆ ಸೂಕ್ತವಾಗಿತ್ತು.
- Coalkers walk: ಕೊಡೈನ ಇನ್ನೊಂದು ಪ್ರಮುಖ ಆಕರ್ಷಣೆ. 3 rs entrance ಫೀಸ್ ! ಒಂದು ಕಿಲೋಮೀಟರು ನಡಿಗೆ. ಮಿಸ್ಟ್ ಇಲ್ಲ ಅಂದ್ರೆ, ಕೊಡೈನ ಹಸಿರು ಸಿರಿಯನ್ನ ನೋಡಿ ಸವಿಬಹುದು. ದೂರದ Dolphins Nose ಕಾಣತ್ತೆ ಅಂತೆ ಇಲ್ಲಿಂದ! ಮೋಡ/ಬಿಸಿಲು ಎರಡೂ ಇದ್ದಲ್ಲಿ , Brocken spectre ನೋಡಬಹುದು! ನಿಮ್ಮ ಹಿಂದೆ ಸೂರ್ಯ, ಮುಂದೆ ಮೋಡ ಇದ್ದಲ್ಲಿ , ನಿಮ್ಮ ನೆರಳು ಮೋಡದ ಮೇಲೆ ಬೆಳತ್ತೆ , ಕಾಮನಬಿಲ್ಲಿನ ಬಣ್ಣಗಳ ಜೊತೆಯಲ್ಲಿ! ಆದರೆ ನಾವು ಹೋದಾಗ ಮೋಡಗಳದ್ದೇ ಕಾರುಬಾರು ! ದಾರಿಯುದ್ದಕ್ಕೂ ಬಗೆ ಬಗೆಯ ಅಂಗಡಿಗಳು: ತಿಂಡಿ-ತೀರ್ಥ, ಆಟ ಸಾಮಾನುಗಳು , Woolen clothes etc etc . ಜನ ಜಂಗುಳಿ ಕಡಿಮೆ ಇದ್ದಲ್ಲಿ, ಈ ಜಾಗ ಅದ್ಭುತ !
- Dolphins Nose : ಕೊಡೈ ಇಂದ ೮ kms . ತುಂಬಾ ಕಡಿದಾದ ರಸ್ತೆಲಿ ಇಲ್ಲಿಗೆ ಹೋಗ್ಬೇಕು. ದಾರಿ ಮಧ್ಯದಲ್ಲಿ ಜಲಪಾತ ಒಂದು ಸಿಗತ್ತೆ ನೋಡಕೆ. ಆಳವಾದ ಪ್ರಪಾತದಲ್ಲಿ ೨ kms ಇಳಿದು ಹೋದ್ರೆ, Dolphins Nose ಸಿಗತ್ತೆ. ಚಾರಣದ ಮಧ್ಯದಲ್ಲಿ Orange juice , ಮ್ಯಾಗಿ , ಬಗೆ ಬಗೆಯ ಹಣ್ಣುಗಳು , 'Om blate' ಅಂಗಡಿಗಳು ಸುಮಾರು ಸಿಗತ್ತೆ! ಆಕಾಶದೆತ್ತರಕ್ಕೆ ಬೆಳೆದ ಪೈನ್ ಮರಗಳ ಮದ್ಯದ ಚಾರಣ ಸಕ್ಕತ್ತಾಗಿದೆ! ಒಂದು narrow rock , ಆಳವಾದ ಕಂದಕಕ್ಕೆ ಮೂಗು ತೋರಿಸಿದಂತೆ ಮೈ ಚಾಚಿ ನಿಂತಿದೆ! ನಿಜಕ್ಕೂ ಮೈ ನವಿರೇಳಿಸುವ ಜಾಗ ! ಆ ಕಲ್ಲಿನ ಮದ್ಯ ಹೋಗಿ ನಿಲ್ಲೋಕೆ, seriously ಮೀಟರ್ ಇರಬೇಕು! ಭಯ ಹುಟ್ಟಿಸುವದರ ಜೊತೆಗೆ ಖುಷಿ ಕೊಡತ್ತೆ! ಆ ಮೈ ಕೊರೆಯುವ ಚಳಿಯಲ್ಲಿ , ಬೆವರು ತರಿಸತ್ತೆ , ಮೇಲೆ ಹತ್ತುವ ದಾರಿ !
ಒಟ್ನಲ್ಲಿ ಕಾಂಕ್ರೀಟು ಕಾಡಿಂದ ಹೊರಗೆ ಬಂದು, ಶುದ್ಧ ಗಾಳಿ ತೆಗೊಂಡು, ಆರಾಮಾಗಿ ಕಾಲ ಕಳೆಯೋಕೆ ಹೇಳಿ ಮಾಡ್ಸಿದ್ ಜಾಗ! As always, ಟ್ರಿಪ್ ಇಂದ ಹೊರಡೋವಾಗ ಬೇಜಾರು! ಸೋಮವಾರ ಯಾಕ್ ಬರತ್ತೆ ಅಂತ ಅನ್ಸತ್ತೆ! But ಸೋಮವಾರ ಬಂದ್ ಹಂಗೆ ಶುಕ್ರವಾರನೂ ಬಂದೆ ಬರತ್ತೆ ಅಂತ ಸಮಾಧಾನ ಮಾಡ್ಕೊಂಡು , 'Mist'ical ಊರಿಗೆ ಟಾಟಾ ಮಾಡಿ ಬೆಂಗಳೂರು ಬಂದು ಸೇರ್ಕೊಂಡ್ವಿ :)
Photos: picasaweb.google.co.in/chethu123/Kodai02#
ಸೂಪರ್ ಆಗಿ ಬರೆದಿದ್ಯ ಚೇತು , ulti ಇದೆ ..:)
ReplyDeletewelcome back ;) chenaagide post. Kodai plan maaDbeku maLe mugdmele anstaa ide!
ReplyDeleteಸೂಪರ್..
ReplyDeletewonderful writing, nice post..
soopperraaaa.... sakattagide... keep dem on ....
ReplyDeleteSuper!! Nice post:)
ReplyDeleteWow.. :)
ReplyDeleteಸುಂದರ ಆಗಿ ಬರಿದಿದ್ದೀರಿ, ದೀಪಾವಳಿಯ ಶುಭಾಶಯಗಳು.
ReplyDelete