7
ಸೈಕಲ್ಗಳು , 450 km, 5 ದಿನ ! ಜೋಯ್ಡಾ-ಅಣಶಿ-ದಾಂಡೇಲಿಯ ದಟ್ಟ ಕಾಡು ,
ಉಂಚಳ್ಳಿ-ಶಿವಗಂಗಾ-ಕೆಪ್ಪ ಜೋಗದ ಜಲಧಾರೆಗಳು, ಉತ್ತರ ಕನ್ನಡದ ಪ್ರಮುಖ ಕೇಂದ್ರಗಳಾದ
ಸಿದ್ಧಾಪುರ-ಸಿರಸಿ-ಯಲ್ಲಾಪುರ, ಕಡಲತಡಿಯ ಕಾರವಾರ-ಅಂಕೋಲಾ-ಗೋಕರ್ಣ : We went , we
saw and we conquered! ಅಲೆಮಾರಿಯ ಒಂದು ಮಾಮೂಲಿ ಪ್ರವಾಸಕ್ಕಿಂತ ಇದು ವಿಭಿನ್ನ.
ದಾರಿಯಲ್ಲಿ ಸವಿಯಲು ಸಿಗುವ ಉತ್ತರ ಕನ್ನಡದ ಭಾಷೆ-ಸಂಸ್ಕೃತಿ-ಜನ ,ನಮಗೆ ಸಿಕ್ಕ
ಆತಿಥ್ಯ ಈ ಪಯಣವನ್ನು ಇನ್ನೂ ವಿಶೇಷವಾಗಿಸಿತ್ತು!
ದೋಸೆ ಕಾವಲಿ ಒಂದು ದೊಡ್ಡ factory ತರ! ಹಸಿದ ಹುಲಿಗಳಿಗೆ ನಿರಂತರವಾಗಿ ಆಹಾರ ಒದಗಿಸುವ ಫ್ಯಾಕ್ಟರಿ ಅದು !
ದೋಸೆ-ಚಟ್ನಿ , ದೋಸೆ-ಸಾಗು , ದೋಸೆ- ಜೋನಿ ಬೆಲ್ಲ , ದೋಸೆ-ತುಪ್ಪ , ದೋಸೆ-ಬೆಣ್ಣೆ , ದೋಸೆ-ಮೊಸರು .
ಬೆಲ್ಲದಲ್ಲೂ ಹಲವು ಬಗೆ : ಗಟ್ಟಿ ಬೆಲ್ಲ , ಕಾಯಿಸಿದ ಬೆಲ್ಲ , ಕೊಬ್ಬರಿ ಮಿಶ್ರಿತ ಬೆಲ್ಲ .
ಎಲ್ಲಾ combination ತಿಂದು ಮುಗಿಸುವ ತನಕ ಬಿಡುಗಡೆ ಇಲ್ಲ :D
ಜೊತೆಗೆ ಬದಿಗೆ ಇರಲಿ ಎಂದು ಗಿಣ್ಣ , ಒಂದೆರಡು ಉಂಡೆಗಳು !
ಹೊಟ್ಟೆ ತುಂಬಿ ಸಾಕು ಅಂದ ಮೇಲೂ , ಒಂದು ೪ ದೋಸೆ ಬಾಳೆಎಲೆ ಮೇಲೆ ಬೀಳೋದ್ರಲ್ಲಿ doubtE ಇಲ್ಲ !
"ಬಿಡಿಯ" ಮಾಡ್ಕೊಳೊಕೆ ಅವಕಾಶನೆ ಇಲ್ಲ!
ನಮ್ಮ ಈ ಸೈಕಲ್ ಜಾಥಕ್ಕೆ ಸಿಕ್ಕ ಪ್ರತಿಕ್ರಿಯೆಗಳು ಅದ್ಬುತವಾಗಿದೆ!
"ನಿಮ್ಮದು ಎಂತ ದೊಂಬರಾಟ ಮಾರಾಯ್ರೆ "
"ಸಿರಸಿಯಿಂದ ದಾಂಡೆಲಿಗೆ ಹೋಗಿ ಕಾರವಾರಕ್ಕೆ ಬಂದ್ರಾ ?! ಡೈರೆಕ್ಟ್ ಆಗಿ ಬರಬಹುದಿತ್ತಲ್ವಾ !"
"ನಿಮ್ಮ ಸಾಹಸನ ಮೆಚ್ಚಬೇಕಾಗಿದ್ದೆ " :D
"ಕೆಲಸ ಇಲ್ಲ ಈ ಬೆಂಗಳೂರು ಜನಕ್ಕೆ "
"ಅಯ್ಯೋ ಪಾಪ "
"ಅಷ್ಟ ದೂರ ಸೈಕಲ್ ಅಲ್ಲಿ ಹೋಗ್ತೀರಾ ? ಆಗಲ್ಲ ಬಿಡಿ "
"ಅಲ್ಲಿಂದ ಸೈಕಲ್ ಅಲ್ಲಿ ಬಂದ್ರಾ ! ಪರವಾಗಿಲ್ಲ ಮಾರಾಯ್ರೆ "
"ಎಲ್ಲ ಓಕೆ , ಸೈಕಲ್ ಯಾಕೆ? "
ಒಟ್ನಲ್ಲಿ ಈ ಐದು ದಿನಗಳ ಕಾಲ ನಾವು ಸೂಪರ್ stars. ರಾಜಬೀದಿಯಲ್ಲಿ ತೇರು ಹೋಗೋದನ್ನೇ ಭಕ್ತಿಯಿಂದ ನೋಡುವಂತೆ , ಎಲ್ಲರ ದೃಷ್ಟಿ ನಮ್ಮ ಮೇಲೆಯೇ . ಸಣ್ಣ ಮಕ್ಕಳಂತೂ ಆದಷ್ಟು ದೂರ ನಮ್ಮ ಹಿಂದೆ ಸೈಕಲ್ನಲ್ಲೋ , ಓಡಿಕೊಂಡೋ ಬಂದು ಅವರ ಆಶ್ಚರ್ಯ ಸೂಚಿಸುತ್ತಿದ್ದರು ! ನಿಂತಲ್ಲೆಲ್ಲ ಒಂದು ಸಣ್ಣ ಗುಂಪೇ ನಮ್ಮನು ಸುತ್ತಿವರೆಯುತ್ತಿತ್ತು :D ಐದು ದಿನದ ಸೈಕಲ್ ತುಳಿತ ಪ್ರಯಾಸವಾಗಲಿಲ್ಲ , ವಿನೋದದ ವಿಹಾರವಾಗಿತ್ತು !

ಒಳ ಹೊಕ್ಕಷ್ಟೂ ವಿಸ್ಮಯ ಬಿಚ್ಚಿಡುವ ಪಶ್ಚಿಮ ಘಟ್ಟಗಳು ಕೈ ಬೀಸಿ ಕರೆಯುತ್ತಿವೆ .. ಮುಂದಿನ ಪ್ರಯಾಣಕ್ಕೆ ನಾವು ರೆಡಿ , ನೀವು ? ;)
sooper brother..:)
ReplyDeleteHaage nammannu swalpa karedre, naavu bandu Paschima Gattagalanna nodtivi sir.... Sakkat aagi bariteera neevu sir....
ReplyDeleteಉತ್ತರ ಕನ್ನಡದ ಭಾಷೆಯಲ್ಲಿ ಹೇಳೋದಾದ್ರೆ "ಚೊಲೋ ಬರಿತ್ಯೋ ಬ್ಲಾಗನ್ನ.. ಹಿಂಗೆ ಪುರುಸೊತ್ತು ಆದಾಗ ಬರಿತಾ ಇರು "
ಓದಿ ಖುಷಿಯಾತಿತು. ತುಂಬ ಮಜ ಮಾಡಿದ್ದೀರ ಅಂತ ಅನಿಸುತ್ತಿದೆ. ಪ್ರದೀಪ್ ನನ್ನನ್ನು ಕರಿಲೇ ಇಲ್ಲ ಅಂತ ದೂರೊಂದಿದೆ :)
ReplyDelete