ಜಟಿಲ ಕಾನನದ
ಕುಟಿಲ ಪಥಗಳಲಿ
ಹರಿವ ತೊರೆಯು
ನಾನು.
ಎಂದಿಗಾದರು ಕಾಣದ
ಕಡಲನು
ಸೇರಬಲ್ಲೆನೇನು?
ಸೇರಬಹುದೇ ನಾನು?
ಕಡಲ ನೀಲಿಯೊಳು ಕರಗಬಹುದೇ ನಾನು?
ಜಲಪಾತ ಎಂದಾಗ ನೆನಪಿಗೆ ಬರುವುದು ಜೋಗದ ಸಿರಿ , ಭರಚುಕ್ಕಿಯ ಭಾರ ,ಗಗನಚುಕ್ಕಿಯ ವಿಸ್ತಾರ !ಪಶ್ಚಿಮ ಘಟ್ಟಗಳು ತನ್ನ ಒಡಲಿನಲ್ಲಿ ಮುಚ್ಚಿಟ್ಟಿರೋ ಜಲಪಾತಗಳು ಅದೆಷ್ಟೋ ! ನಿಭಿಡ ಪರ್ವತ ಸಾಲುಗಳಲ್ಲಿ , ದಟ್ಟ ಕಾನನದ ಮದ್ಯೆ , ನಿಶ್ಯಬ್ದತೆಯ ಹುಟ್ಟಡಗಿಸಿ ಭೋರ್ಗರೆಯುವ ಜಲಧಾರೆಗಳು ನಮ್ಮೆಲ್ಲರ ಹೆಮ್ಮೆಯ ಆಸ್ತಿ !
ಮಳೆಗೆ ಮೈದುಂಬಿ ಧುಮ್ಮಿಕ್ಕುವ , ಮಂಜಿನ ಮುಸುಕಿನಲ್ಲಿ ಮಲಗಿರುವ , ಹಸಿರ ಹೊನಲಿನಲ್ಲಿ ಹೊಳೆಯುವ ಜಲಪಾತಗಳು ಬಿಡುಗಡೆಯ ಸಂಕೇತ . ಬಿರು ಬೇಸಿಗೆಯ ಬೇಗೆಯಲಿ ಬೆಂದು ಬೇಸತ್ತ ಮನಕ್ಕೂ ಮುದ ನೀಡುವ ಅಂತಹ ಕೆಲವು ಜಲಪಾತಗಳ ಚಿತ್ರಗಳು ಇಲ್ಲಿವೆ. ನೋಡಿ ,ಆನಂದಿಸಿ ;)
|
ದಬ ದಬನೆ ಧುಮುಕುವ ದಬ್ಬೆ! |
|
ಕೋಲ್ಮಿಂಚಿನಂತಿರುವ ಬೆಳ್ಳಿ ಗುಂಡಿ |
|
ಗುಂಡ್ಯದ ಗೊಂಡಾರಣ್ಯದಲ್ಲಿ ಕನ್ನಿಕೈ |
|
ಸುಂದರ ಕೊರಕಲನ್ನು ಕೊರೆದ ಅಪ್ಸರಕೊಂಡ |
|
ಬೇಸಿಗೆಯ ಅಂಚಿನಲ್ಲಿ ಅಳಿಯದೆ ಉಳಿದ ಶಿವಗಂಗೆ |
|
ಮಳೆಗಾಲದ ಮಾಯೆ - ಸಾತೊಡ್ಡಿ |
|
ಮಂಜಿನ ಮರೆಯಲ್ಲಿ ಮಾಗೋಡು |
|
ಹಾಲ್ನೊರೆಯ ಸಾಗರ - ದೂದ್ ಸಾಗರ್
|
|
ಬಿಡುಗಡೆಗೆ ಮುನ್ನ ! ಬರ್ಕಣ ಜಲಪಾತದ ಮೇಲಿನ ಭಾಗ... |
|
ಬೇಸಿಗೆಯಲ್ಲೂ ಬಿಸಿಲು ಕಾಣದ ದಟ್ಟ ಕಾಡಿನ ಮಗಳು - ಮಗೆಬೈಲು |
Its easy to write a blog you see.. Quote few lines from some book.. Get few images from google and there it is...:P
ReplyDeletesuper photos...
ReplyDelete