Sunday, October 6, 2013

ಹೀಗೊಂದು ವೃತ್ತಾಂತ :D

Scene 1 in ಹೆಸರಘಟ್ಟ
ನಾನು : ಸಾರ್ , ಬ್ಯಾಲಕೆರೆ ಅಲ್ಲಿ ನವಿಲು ಪಾರ್ಕ್ ಇದ್ಯಲ್ಲ , ಅದು ಎಲ್ಲಿ ಬರತ್ತೆ ?
ಆಸಾಮಿ ೧ : ನವಿಲು ಇಲ್ಲ , ಕೋಳಿ ಫಾರಮ್ ಐತಣ್ಣೊ !
ನಾನು : ಓಹ್ ಹಂಗಾ , ಅಲ್ಲೇ ಹೋಗಿ ವಿಚಾರಿಸ್ತೀವಿ ಬಿಡಿ .. ತುಂಬಾ  ಥ್ಯಾಂಕ್ಸು :)
 

Scene  2  in ಬ್ಯಾಲಕೆರೆ
ನಾನು: ಸಾರ್ , ಇಲ್ಲಿ ನವಿಲು ಪಾರ್ಕ್ ಇದ್ಯಲ್ಲ , ಅದು ಎಲ್ಲಿ ಬರತ್ತೆ ?
ಆಸಾಮಿ ೨: ಅಯ್ಯೋ , ಇಲ್ಲಿಗ್ ಯಾಕ್ ಬಂದ್ರಿ , ಅದು ಬನ್ನೇರಘಟ್ಟ ಅಲ್ಲಿ ಇರೋದು !
ನಾನು: ಇಲ್ಲ ಸಾರ್, ಇಲ್ಲೂ ಇದೆ .. ಗೂಗಲ್ ಮ್ಯಾಪ್ ಅಲ್ಲಿ ಹಾಕಿದಾರೆ
ಆಸಾಮಿ ೨ : ಅಯ್ಯೋ ಹ್ಯಾಂಗ್ ಆದ್ರೆ ಅವ್ರ್ನೇ ಕೇಳ್ಕೊಳಿ , ನಮ್ನ್ ಯಾಕ್ ಕೇಳ್ತೀರಿ :P
ನಾನು : Grrrrr ..


Scene 3 in ಬ್ಯಾಲಕೆರೆ
ನಾನು: ಸಾರ್ , ಇಲ್ಲಿ ನವಿಲು ಪಾರ್ಕ್ ಇದ್ಯಲ್ಲ , ಅದು ಎಲ್ಲಿ ಬರತ್ತೆ ?
ಆಸಾಮಿ  ೩ : ಪಾರ್ಕ್ ಎಲ್ಲ ಇಲ್ಲ ಸಾರ್ ,ಮುಂದೆ ಕಾಡ್ ಐತೆ , ಹೋಗಿ ನೋಡಿ ಕಾಣ್ಸ್ಕೊಬಹುದು :D
ನಾನು : (ಭಲೇ , ಕಾಡ್ ಅಲ್ಲಿ ನವಿಲು ಇದೆ ಅಂತ ತಿಳ್ಸಿ ತುಂಬ ದೊಡ್ಡ್ ಸಹಾಯ ಮಾಡಿದ್ರಿ )
ಅಲ್ಲ ಸಾರ್, forest dept ಅವ್ರು ನವಿಲು ಸಾಕ್ತಾರೆ ಅಂತೆ , ಅದ್  ಎಲ್ಲಿ ?
ಆಸಾಮಿ ೩ :  ha  ha .. ಒಹ್ ಅದಾ ! ಅಲ್ಲಿ ಏನ್ ಇಲ್ಲಣ್ಣಾ .. dept ಅವ್ರು  ಒಂದ್ ೪ ಮರ ನೆಟ್ಟವ್ರೆ , ಅದ್ರು ಮೇಲೆ ನವಿಲು ಬಿಟ್ಟಿದಾರೆ . ಅವು ಎಲ್ಲಿ ಇರ್ತದೆ ಹೇಳಿ , ಎಲ್ಲೋ ಕಾಡಿಗೆ ಹಾರಕೊಂಡ್ ಹೋಗಿರ್ತದೆ ..  ಹಿಂಗೆ ೧ km ಹೋದ್ರೆ ಸಿಕ್ತದೆ . ಅಲ್ಲಿಗೆ ಯಾಕ್ ಹೋಗ್ತೀರಾ ,ಸುಮ್ನೆ ಮನೆಗೆ ಹೋಗಿ :P
ನಾನು : Facepalm  :P :D
ಪ್ರದೀಪ & ಅವಿ : ha  ha :D
ನಾನು : ಸರಿ ನಡಿರಪ್ಪ , ಬಿಸ್ಲು ಬೇರೆ ಜಾಸ್ತಿ ಇದೆ. ಬೇಗ ಬೇಗ ಸೈಕಲ್ಲು ತುಳಿದು ಮನೆ ಸೇರಿಕೊಳೋಣ :P 
ಕಾಣದ ನವಿಲನ್ನು ಮನಸಾರೆ ಉಗಿದು , ನಾವು ಮತ್ತೆ ಸೈಕಲ್ ತುಳಿಯೋಕೆ ಶುರು ಮಾಡಿದೆವು :)
 

No comments:

Post a Comment