Wednesday, May 6, 2009

ಇಂಜಿನಿಯರಿಂಗ್!!

ಮೊನ್ನೆ ಸಂಜೆ ಮೈಸೂರಲ್ಲಿ ಮೋಡ ಕವಿದ ವಾತವರಣ ಇದ್ದು ಗುಡುಗು ಸಹಿತ ಭಾರೀ ಮಳೆ ಬರೋ ಸೂಚನೆಗಳು ಕಾಣ್ತಾ ಇತ್ತು! ನಾನು ಮತ್ತೆ ಭರತ್ ಶಾಂತಿಸಾಗರ್ ಅಲ್ಲಿ ಕಾಫಿ ಕುಡಿತ ಇದ್ವಿ.ಇನ್ನು maximum 1೦ ಕ್ಲಾಸ್ ಆಗಬಹುದು ನೋಡು ನಮ್ ಸ್ಟುಡೆಂಟ್ ಲೈಫ್ ಅಲ್ಲಿ ಅಂತ ಹೇಳ್ದಾಗ ನನ್ನ ತಲೇಲಿ ಇಡೀ ಇಂಜಿನಿಯರಿಂಗ್ ಜೀವನ ಒಂದ್ ಪಿಕ್ಚರ್ ತರ ಮಿಂಚಿ ಮರೆಯಾಗಿ ನನ್ನನ depression ಆವರಿಸಿಕೊಳ್ತು :( ಈ ನಾಲ್ಕು ವರ್ಷಗಳ ಸುಂದರ ಪಿಕ್ಚರ್ ನ ನಿಮ್ ಜೊತೆ ಹಂಚ್ಕೊಳಕೆ ಅಂತ ಈ ಪೋಸ್ಟು :)

ಸುಮಾರು 4 ವರ್ಷದ ಹಿಂದೆ ,ಅಕ್ಟೋಬರ್ 4,2005 ರಂದು ಜೇಸಿ ಕಾಲೇಜ್ ಸೇರೋವಾಗ ಒಳ್ಳೇ ಕಾಲೇಜ್ ಸೇರ್ತಾ ಇದೀನಿ ಅನ್ನೋ ಖುಷಿ ಜೊತೆ ನನ್ನಂತ ಮುಗ್ದ ,ಪಾಪದ(?) ಮಕ್ಕಳಲ್ಲಿ ಇರೋ ragging ಭೂತದ ಭೀತಿನೂ ಇತ್ತು. ಪಿಯೂಸಿ ಅಲ್ಲಿ ಇದ್ದ ಓದಬೇಕು ಅನ್ನೋ ಸ್ಪಿರಿಟ್ ನ ಜೊತೇಲೆ ತೆಗೊಂಡ್ ಬಂದಿದ್ವಿ! ಸುಮಂತನ್ ಜೊತೆ ಸೇರಿ (ಫಸ್ಟ್ ಇಯರ್ ರೂಂ ಮೇಟ್) ದಿನ ಓದ್ತಾ ಇದ್ದೆ. ಕ್ಲಾಸ್ ಅಲ್ಲಿ ಫಸ್ಟ್ ಬೆಂಚು ನಮ್ಗೆ ಅಂತ ರಿಸರ್ವ್. ಅನಿಲ್ ಮತ್ತೆ ಸುಜಿತ್ C Section ಅನ್ನೋ ರೌಡಿಗಳಿಂದ ತುಂಬಿದ ಕ್ಲಾಸ್ ಅಲ್ಲಿ ನನ್ನ ಬೆಂಚ್ mates. ಮೈಸೂರಿನ ಚಳಿಗಾಲದ ಚಳಿಗೆ ಬೆಳ್ಗೆ ಬೆಳ್ಗೆ ೭.೩೦ ಗೆ ಮೆಕ್ಯಾನಿಕಲ್ ,ಎಲೆಕ್ಟ್ರಿಕಲ್ ಕ್ಲಾಸ್ ಅಲ್ಲಿ ನಿದ್ರೆ ಮಾಡ್ತಾ , ಪಾಠ ಕೇಳ್ತಾ , ಟೈಮ್ ಪಾಸು ಮಾಡ್ತಾ ಇದ್ವಿ:) WorkShop ಅಲ್ಲಿ ಫೈಲ್ ಮಾಡೋದು,ವೆಲ್ಡ್ ಮಾಡೋದು, ತಗಡು ಕೆಲಸ ಮಾಡೋದಕ್ಕೆ ನಂಗೆ ಖುಷಿ ಆಗ್ತಾ ಇತ್ತು:)ಕ್ಲಾಸ್ ಬಂಕ್ ಮಾಡಿದ್ರೆ ಏನೋ ಮಹಾ ಪಾಪ ಮಾಡಿದ್ವಿ ಅಂತ ಯೋಚಿಸ್ತಾ ಇದ್ದ ಕಾಲ ಅದು ;) ಇಂಟರ್ನಲ್ಸ್ ಗೆ 20 ದಿನಕ್ಕೆ ಮುಂಚೆ ಇಂದ ತಯಾರಿ ಶುರು!ಛೆ! ಆವಾಗ ಎಂತ ಒಳ್ಳೇ ಹುಡ್ಗುರು ಆಗಿದ್ವಿ ಅಲ್ವಾ ??;) ನೋಡ್ತಾ ನೋಡ್ತಾ ಫಸ್ಟ್ ಸೆಮ್ ಹೋಗಿದ್ದೆ ಗೊತ್ತಾಗಿಲ್ಲ. ಸೆಕೆಂಡ್ ಸೆಮ್ ಅಲ್ಲಿ ಜೋಷ್ ಸ್ವಲ್ಪ ಕಡಮೆ ಆಗಿತ್ತು. ಬೆಳ್ಗೆ ಮುಂಚೆ ಮಲ್ಲು/ಮುನೀರಾ chemistry ಕ್ಲಾಸು , ಮಧ್ಯಾನ್ನದ ಗ್ರಾಫಿಕ್ಸ್ lab,electronics ಮೇಡಂ ಕೊಡ್ತಾ ಇದ್ದಿದ್ ಕಾಟ ಇದ್ ಎಲ್ಲ ಅದ್ಕೆ ಕಾರಣ ಇರಬಹುದು!ಬಣ್ಣ ಬಣ್ಣದ reagent ಗಳು, ಬಗೆ ಬಗೆಯ reaction ಗಳು ಇದ್ದ chemistry ಲ್ಯಾಬ್ ಮಾತ್ರ ಸೂಪರ್ :)ಕನ್ನಡ ಕ್ಲಾಸು ಮಜವಾಗ್ ಇರ್ತಿತ್ತು :)M2 ತೆಗೊಳ್ತಾ ಇದ್ದ LS ಕ್ಲಾಸ್ ನ ಹೆಂಗೆ ಮರಯಕ್ಕೆ ಸಾಧ್ಯ??;)ಜಿಪ್ ಓಪನ್ ಆಗಿ ಕ್ಲಾಸ್ ಗೆ ಬಂದಿದ್ದು ,Not me behind me ಇನ್ಸಿಡೆಂಟು , ಫ್ರಂಟ್ ಬೆಂಚ್ ಅಲ್ಲಿ ಯಾರೋ ನ್ಯೂಸ್ ಪೇಪರ್ ಓದ್ತಾ ಕೂತಿದ್ದು -- ಇದ್ ಎಲ್ಲ Evergreen :)ಅವ್ರ ಮಾರ್ಗದರ್ಶನ ದಿಂದ M2 exam ಅಲ್ಲಿ 100 ಕ್ಕೆ 100 ತೆಗ್ದಿದಕ್ಕೆ ನಾನು ಅವ್ರಿಗೆ ಯಾವತ್ತೂ ಧನ್ಯ;)ಫ್ರೆಂಡ್ಸ್ ಜೊತೆ GRS Fantasy ಪಾರ್ಕ್ ಪ್ರವಾಸ ನಮ್ಮ ಇಂಜಿನಿಯರಿಂಗ್ ಜೀವನದ ಪ್ರಥಮ ಪ್ರವಾಸ :)


ನಾನ್ ಇರೋ PG ಅಲ್ಲೇ ಭರತ್ ,ಆದರ್ಶ್ ಮೊದ್ಲಿನ್ದಾನು ನಂ ಜೊತೇಲೆ ಇದ್ರು.ಸುಮಂತ್ ಬಿಟ್ ಹೋದ ಮೇಲೆ ವಿಕಾಸ್ ನನ್ ರೂಂ ಮೇಟ್ ಆಗಿದ್ದ. ಅನೀಶ್ ಮತ್ತೆ ತೇಜಸ್ 3rd ಸೆಮ್ ಗೆ ಸೇರ್ಕೊಂಡ್ರು. ಈ ನಾಲ್ಕು ವರ್ಷದ ನಮ್ PG life ಚೆನ್ನಾಗ್ ಇತ್ತು. ಮೊದ ಮೊದಲು ಆಡ್ತಾ ಇದ್ದ ಕ್ರಿಕೆಟ್ ಆಟ,competition ಮೇಲೆ ಹೊಡಿತ ಇದ್ದಿದ್ PJ ಗಳು , ಅಗಾಗ ನಡೀತಾ ಇದ್ದ ಸೀರಿಯಸ್ ಚರ್ಚೆಗಳು , T20 ಮ್ಯಾಚ್ ಗಳು, ಅನೀಶ್ ಅವ್ರ ಪಾಠ, ಒಟ್ಟಿಗೆ ನೋಡ್ತಾ ಇದ್ದ ಸಿನೆಮಾಗಳು ಇದ್ನೆಲ್ಲ ನಾನು ಖಂಡಿತ ಮಿಸ್ ಮಾಡ್ಕೊತೀನಿ:(

ಥರ್ಡ್ ಸೆಮ್ ಅಲ್ಲಿ ಬ್ರಾಂಚ್ ಎಂಟ್ರಿ.SJCE CS ನಿಜವಾಗಿಯೂ ಬಿಂದಾಸ್:) [ಇವಾಗ ಅದರ ಸ್ವರೂಪ ಬದಲಾಗಿರೋದು juniors ಗ್ರಹಚಾರ ;)] ಹೊಸ ಸ್ನೇಹಿತರ ಪರಿಚಯ ,ಹೊಸ ಕ್ಲಾಸು ಖುಷಿ ಕೊಟ್ಟಿತ್ತು. EC ಸಬ್ಜೆಕ್ಟು, AD ಲ್ಯಾಬು ೩ನೆ ಸೆಮ್ ಅಲ್ಲಿ ಎಲ್ಲರ ತಲೆ ತಿಂದು ಬಿಟ್ಟಿತ್ತು!ಇರ್ಪು ಜಲಪಾತಕ್ಕೆ ಹೋದ ಕ್ಲಾಸ್ ಟ್ರಿಪ್ ಹಾಗು ಗೋಪಾಲಸ್ವಾಮಿ ಬೆಟ್ಟಕ್ಕೆ ಬೈಕ್ ಟ್ರಿಪ್ ಸ್ಮರಣೀಯ.ಗೆಳೆಯ ಕಾರ್ತಿಕ್ ನ ಜೊತೆ ಇನ್ನೊಮ್ಮೆ GRS ಯಾತ್ರೆ ಮಜವಾಗಿತ್ತು:) ಸುಂದರವಾಗಿದ್ದ ಕ್ಲಾಸಿಗೆ ಹುಳಿ ಹಿಂಡಿದ ಕೆಲವರಿಂದಾಗಿ ಒಂದು ಶೀತಲ ಸಮರ ಉಂಟಾಗಿ ಸುಮಾರು ಗುಂಪುಗಳಾಗಿ ಹೋಯ್ತು ನಮ್ ಕ್ಲಾಸು. ಅದು ಸುಮಾರು ಕಾಲ ಹಾಗೆ ಮುಂದುವರಿತು ಅನ್ನೋದು ನಿಜಕ್ಕೂ ವಿಷಾದನೀಯ :( ಏನೇ ಆಗ್ಲಿ, ನಮ್ಮಷ್ಟಕ್ಕೆ ನಾವಾಗಿ, ಇದ್ದಿದ್ರಲ್ಲಿ ಹಾಯಾಗಿ ಖುಷಿ ಪಡ್ತಾ ಇದ್ವಿ :)

4th sem alli MUP,CO ಅಂತ ಭಯಾನಕ subjects ಗಳ್ನ ಇಟ್ಟು VTU ಅವರೂ ನಮ್ಮ ಮೇಲೆ ಇದ್ದ್ ಬದ್ದ್ ಸಿಟ್ ಎಲ್ಲ ತೋರ್ಸಕೆ ಶುರು ಮಾಡಿದ್ರು.ಒಂದ್ ಘಂಟೆ ಕಾಲ ಸುಮ್ನೆ ಪಾಠ ಕೇಳ್ತಾ ಕೂರೋದು ಅಸಹನೀಯ ಅನ್ಸ್ತಾ ಇತ್ತು. ಪ್ರತಿ ಸೆಮ್ ಗು ಮಾಸ್ ಬಂಕ್ ಗಳ ಸಂಖ್ಯೆ Exponentially ಜಾಸ್ತಿ ಆದ್ವು.ಮನೆಗೆ attendance shortage letter ಹೋಗೋದು ಚಿಕ್ಕ ವಿಷ್ಯ ಆಗಿ ಹೋಯ್ತು !!ವಯನಾಡು ,ಮೀನುಮಟ್ಟಿ,ಎಡಕಲ್ಲು ಗುಡ್ಡದ ಪ್ರವಾಸ ಕೇರಳದ ಸೌಂದರ್ಯನ ನಮ್ಗೆ ತೋರ್ಸಿತ್ತು :)ತಡಿಯಂಡ ಮೂಳ್ ಟ್ರೆಕಿಂಗ್ ಬಗ್ಗೆ ನನ್ನಲ್ಲಿ ಇದ್ದ ಆಸಕ್ತಿ ಹೆಚ್ಚಿಸಿತು :) M4 ಅಲ್ಲಿ ಇನ್ ಒಂದು 100 ತೆಗದು Maths ಗೆ ವಿದಾಯ ಹೇಳಿದ್ ಆಯ್ತು :(

5th ಸೆಮ್ ಅಲ್ಲಿ ತಲೆ ತಿನ್ನೋಕೆ Advanced Mup,Mup lab ಸಾಕ್ ಆಗಿತ್ತು . Extra ಲ್ಯಾಬ್ ಗೆಲ್ಲ ಹೋಗಿ stepper motor ನ ತಿರ್ಗ್ಸಿದ್ದೇ ತಿರ್ಗ್ಸಿದ್ದು :)ಸಾದು ಸುಮನಂತಹ ಲೆಚರರ್ಸ್ ಆ ಸ್ಥಾನಕ್ಕೆ ಹೊಸ dimension ಕೊಟ್ರು ;)ಇನ್ನೂ ನಮ್ ಇಂಜಿನಿಯರಿಂಗ್ ಲೈಫ್ ಅಲ್ಲಿ ಅದ್ ಏನ್ ಏನ್ ನೋಡಬೇಕೋ ಅಂತ ಅನ್ಸಕ್ಕೆ ಶುರು ಆಗಿತ್ತು!!ಮೈಕ್ರೋ xeroxನ ನಾನು ಉಪಯೋಗಿಸಿದ್ದು ಅದೇ ಫಸ್ಟ್ ಟೈಮ್. ಕಳ್ಳನ ತರ pass 1(assembler) ಚೀಟಿ ನೋಡಿ ಇಳ್ಸಿದ್ದೆ!! ಶಿವನ ಸಮುದ್ರ ,ತಲಕಾಡು ಮತ್ತೆ ಕೆಮ್ಮಣ್ಣುಗುಂಡಿ ,ಹೆಬ್ಬೆ ಫಾಲ್ಸ್ ಟ್ರಿಪ್ ಈ ಸೆಮ್ ಸ್ಪೆಷಲ್:)ನನ್ ರೂಂ ಮೇಟ್ ಮತ್ತೆ ಚೇಂಜ್ ! ಹರಿ ಅಂತ NI ಹುಡ್ಗ.ಒಳ್ಳೇ ಜನ :)



6th ,7th ಸೆಮ್ ಗಳು ಅದ್ ಎಷ್ಟ್ ಬೇಗ ಬಂತು ಅಂತ ಯಾರಗೂ ಗೊತ್ತಾಗಲೇ ಇಲ್ಲ.Placements ಚಿಂತೆ ಎಲ್ಲರನ್ನ ಕಾಡ್ತಾ ಇತ್ತು.ಹಳೆ ಪುಸ್ತಕಗಳು ಮತ್ತೆ ಉಪಯೋಗಕ್ಕೆ ಬಂದವು!puzzles, apti ಪ್ರಶ್ನೆಗಳು ಕ್ಲಾಸ್ ರೂಂ ಅಲ್ಲಿ ಪಾಠದ ಕಾಟ ತಪ್ಪಿಸ್ಕೊಳೊಕೆ ಸಹಾಯ ಮಾಡಿತ್ತು. ಆದ್ರೂ Software engineering ,OOAD ವಿಷಯಗಳು ಬೋರ್ ಹೊಡ್ಸಿದ್ವು. PSQ ಪ್ರಶ್ನೆ ಪತ್ರಿಕೆ ಒಂದು nightmare ಆಗಿತ್ತು!.Placements ಚೆನ್ನಾಗೆ ನಡಿತು.ನನ್ನ ಪಾಲಿಗೆ ಸಿಕ್ಕಿದ್ದು ಟೆಕ್ ಮಹಿಂದ್ರ ಮತ್ತೆ Hp ProCurve :)ಇದೆಲ್ಲದರ ಜೊತೆಗೆ ಕೋಟೆಬೆಟ್ಟ, ಕೊಡಚಾದ್ರಿ, ಗೋಪಾಲಸ್ವಾಮಿ ಬೆಟ್ಟ ಪ್ರವಾಸ ಮನಸ್ಸಿಗೆ ಮುದ ನೀಡಿತ್ತು.ಅಷ್ಟರಲ್ಲೇ ಕೊನೆಯ ಸೆಮ್ ಬಂದ್ ಆಗಿತ್ತು :(

8th ಸೆಮ್ ..ಕೊನೆಯ ಸೆಮ್!:( ಪ್ರಾಜೆಕ್ಟ್ ,ಸೆಮಿನಾರ್ ಗಳ ಸೆಮ್ !Hp ಅಲ್ಲಿ ನಂಗೆ internship ಸಿಕ್ಕಿ , ಕೈಗೆ ಒಂದ್ ಇಷ್ಟ್ ದುಡ್ಡು ಬರಕೂ ಶುರು ಆಯ್ತು :) AMC ಕಾಟ ವಿಪರೀತ ಆಯ್ತು !ಆಗ್ತಾನೆ ಇದೆ. ಹಲವಾರು ಜನ attendance shortage ಇಂದ ಇಂಟರ್ನಲ್ಸ್ ಬರಿದೇ ಇರೋ ಹಾಗೆ ಮಾಡ್ಬಿಟ್ಟು , ನಮ್ಮ ಪರಿಸ್ಥಿತಿ ನೋಡಿ ನಗಾಡೋ AMC ಗೆ ಪಿ ಎಚ್ ಡಿ ಅಲ್ಲಿ ೨ ಸಬ್ಜೆಕ್ಟ್ಸ್ ಡಮಾರ್ ಅನ್ನೋ ಸುದ್ದಿ ಕೇಳಿ ಬಹಳ ಖುಷಿ ಆಯ್ತು :)ಕುಮಾರ ಪರ್ವತ ಟ್ರೆಕ್ ಲೈಫ್ ಟೈಮ್ experience:)ಇನ್ ಏನು ಕೊನೆಯ ಸೆಮ್ ನ ಕೊನೆ ನು ಬರ್ತಾ ಇದೆ. ಇನ್ನು ಐದರಿಂದ ಆರು ಕ್ಲಾಸು ನಡಿಬಹುದು ಅಷ್ಟೆ. ನಾಳೆ ಇಂದ ಜೇಸೀಯಾನ.ಕೊನೆಯ ಜೇಸೀಯಾನ ಅಂತ ನೆನ್ಸ್ಕೊಂಡರೆ ಬೇಜಾರಾಗತ್ತೆ :(

ನಡುವೆ ಕಾಲೇಜ್ ಅಲ್ಲಿ ಸಾಕ್ ಅಷ್ಟು ಹೆಸರನ್ನು ತೆಗೊಂಡಿದಿವಿ! ಕೆಟ್ಟದಾಗಿ ಹಾಡು ಹೇಳೋ ಸ್ಪರ್ಧೆ ಅಲ್ಲಿ ಯಾವತ್ತು ನಮ್ಗೆ ಫಸ್ಟ್!ಇತ್ತೇಚಿಗೆ garbage collectors ಅಂತ ಗ್ರೂಪ್ ಮಾಡಿದ್ವಿ. ನಾವ್ ಮಾಡಿದ ಡಾನ್ಸ್ ಫುಲ್ ಫ್ಯೇಮಸ್ಸು!ಅದು ಹಲವಾರು ಕೂಳೆ ಡಾನ್ಸ್ ಗಳಿಗೆ ಸ್ಫೂರ್ತಿ ಆದ್ರೆ ಅದರಲ್ಲಿ ಆಶ್ಚರ್ಯ ಏನು ಇಲ್ಲ!!juniors ಬಂದು ನಮ್ಮ ಹತ್ರ garbage collectors ಹಸ್ತಾಂತರ ಮಾಡಿ ಅಂತ ಕೇಳಿದ್ದು ನಮ್ಮ ಪ್ರಸಿದ್ದಿ ತೋರ್ಸತ್ತೆ ಅಲ್ವಾ?? ;)



ಕ್ಲಾಸು,ಮಾಸ್ ಬಂಕ್ಸು,attendance shortage,ಇಂಟರ್ನಲ್ಸು,micro xeroxu, parking lot ಅಲ್ಲಿ ಪಕ್ಷಿ ವೀಕ್ಷಣೆ,ಗೆಳೆಯರ ಜೊತೆ ಕ್ಯಾಂಪಸ್ ಸರ್ವೆ,yampa ಅಲ್ಲಿ ಕಾಡು ಹರಟೆ ,ಸಾಲ್ ಅಲ್ಲಿ ಬಾರೋ dept ಫೆಸ್ಟ್ ಗಳು, ಲೇಟ್ ನೈಟ್ studies ,exam ತಲೆ ಬಿಸಿ,ಪ್ರತಿ ಸೆಮ್ ಕಾಡೋ results ಭೂತ,ಕ್ಲಾಸ್ ಟ್ರಿಪ್ಸು,ಮೈಸೂರು........ ಇನ್ನೂ ಅದ್ ಏನ್ ಏನನ್ನ ಮಿಸ್ ಮಾಡ್ಕೊತಿವೋ ಗೊತ್ತಿಲ್ಲ. ಈ ನಾಲ್ಕು ವರ್ಷದಲ್ಲಿ ಸಾಕಷ್ಟು ಕಲ್ತಿದಿವಿ. ವಿದ್ಯಾರ್ಥಿ ಜೀವನ ಅನ್ನೋ GOLDEN ಲೈಫ್ ನ ಮುಗಿಸಿ ,ಆರ್ಥಿಕ ಹಿಂಜರಿತದ ನಡುವೆ ಹೊಸ ಜಗತ್ತಿಗೆ ಕಾಲಿಡ್ತಾ ಇದೀವಿ .ಕೆಲ್ಸಕ್ಕೆ ಹೋಗ್ತಾ ಇದೀವಿ ಅಂತ ಖುಷಿ ಪಡಬೇಕೋ ,ಇಲ್ಲ ಸ್ಟುಡೆಂಟ್ ಲೈಫ್ ಆಗ್ ಹೋಯ್ತು ಅಂತ ಬೇಜಾರು ಪಡಬೇಕೋ ಅಂತ ನಂಗೆ ಗೊತ್ತಾಗ್ತಾ ಇಲ್ಲದ ಸ್ತಿತಿ ಅಲ್ಲಿ ನಾನಿದ್ದೀನಿ.ಬೇಜಾರ್ ಆಗತ್ತೆ ಅಲ್ವಾ????:(