Friday, October 26, 2012

ಗತ ವೈಭವದ ಹುಡುಕಾಟದಲ್ಲಿ..

ವಿಶಾಲ ಇತಿಹಾಸವನ್ನು ಹೊಂದಿದ  ನಾಡು ನಮ್ಮದು.
ಇದರ ಕುರುಹು ಎಂಬಂತೆ ಸಹಸ್ರಾರು ಸ್ಮಾರಕಗಳನ್ನು ಕಾಣ ಸಿಗುತ್ತೇವೆ .
ಕೆಲವಾರು ಇಂದಿಗೂ ಅಚ್ಚಳಿಯದಂತೆ ಉಳಿದು ಗತ ವೈಭವವನ್ನು ಸಾರುತ್ತಿವೆ!
ಹಲವಾರು , ಹತ್ತಾರು ಕಾರಣಗಳಿಂದಾಗಿ ಹಾಳು  ಬಿದ್ದಿವೆ .

ಪಾಳು ಬಿದ್ದ ಆ ಗುಡಿ ಗೋಪುರಗಳೇ, ಈ ಬರಹಕ್ಕೆ ಸ್ಪೂರ್ತಿ!
ಇತಿಹಾಸದ ಪುಟದಲ್ಲಿ ಕಳೆದು ಹೋದ ದಾರಿಯಲ್ಲಿ ಹಿಂದೆ ಹೋದಾಗ, ನಾವೇ ರಾಜರಾಗುತ್ತೇವೆ.
ಅಳಿದ ಆ ದಿನಗಳ ವೈಭವವನ್ನು ನೆನೆದು, ಖುಷಿ-ಹೆಮ್ಮೆಯಿಂದ ಬೀಗುತ್ತೇವೆ ..
ಇಂದಿನ ಸ್ಥಿತಿಯನ್ನು ನೋಡಿ ಕೊರಗುತ್ತೇವೆ.


vijaya vittala temple,Hampi

ಮಾಯೆಯ ಮುನಿಸು ,ಕೈಗೆಟುಕದ ಕನಸು , ಭದ್ರ ಬುನಾದಿಯಿರದ ಮಹಾದ್ವಾಕಾಂಕ್ಷೆಗಳು .
ಯಾರ ಆಸೆಗೋ ಯಾವ ದ್ವೇಷಕ್ಕೋ  ಬಲಿಯಾದ  ಸಾಮ್ರಾಜ್ಯಗಳು ..
ಕಾಲ ಚಕ್ರಕ್ಕೆ  ಸಿಕ್ಕು ನಲುಗಿದ ಗುಡಿ-ಗೋಪುರಗಳು...

Mirjaana Fort

Ruins of Kanoor fort


Shettihally Church
ಪೂಜೆಯಿಲ್ಲದೆ ಕಂಬನಿಗರೆವ ಭಗ್ನ ಮೂರ್ತಿಗಳು.
ಅಸಂಖ್ಯ ರಹಸ್ಯಗಳನ್ನು ಒಡಲಲ್ಲಿ ಹುದುಗಿಟ್ಟ ಶಾಸನಗಳು ..
ಬಾವಲಿಗಳ ಕೂಗಿಗೆ ಕರಗುವ ಕತ್ತಲ ಕೋಣೆಗಳು ...

Ruins in qutub minar complex


A statue in Belur Chennakeshava Temple

ನಮ್ಮ ತವರಿನ ಕಲೆ,ಪರಂಪರೆ , ವೈಭವವನ್ನು  ಸಾರಿ ಹೇಳುವ ಈ 'ಪಳೆಯುಳಿಕೆಗಳು' ನಮ್ಮ ಹೆಮ್ಮೆ!
ಅಂದಿನ ಕಲಾ ಕುಶಲತೆ , ಸಾಹಸಗಾಥೆ, ಅದಮ್ಯ ಚೇತನ ಹೊಸ ಸಮಾಜದ ಅನ್ವೇಷಣೆಯಲ್ಲಿ  ತೊಡಗಿರುವ   ನಮಗೆ ಸ್ಪೂರ್ತಿ ! ಸಾಮ್ರಾಜ್ಯಗಳ ಅಳಿವು - ಉಳಿವಿನ ಯಶೋಗಾಥೆ, ಇಂದು ನಮಗೆ ಪಾಠ !
ಉಳಿದಿರುವ ಇಷ್ಟನ್ನು ನೋಡಿ ,ಗೌರವಿಸಿ,ಉಳಿಸುವುದು ನಮ್ಮ ಹಕ್ಕು,ಕರ್ತವ್ಯ ! ಅಲ್ಲವೇ?

Thursday, September 20, 2012

ಮಳೆಗಾಲದ ಒಂದು ದಿನ !

ಅಡಿಗೆ ಮನೆಯಲ್ಲಿನ ಪಾತ್ರೆಗಳ ಟಣ-ಟಣ ಸದ್ದು ಸುಪ್ರಭಾತವನ್ನು ಹಾಡಿತ್ತು. ಕತ್ತಲು ಇನ್ನೂ ಕರಗಿರಲಿಲ್ಲ. ರಾತ್ರಿಯಿಡೀ ಸುರಿಯುತಿದ್ದ ಮಗೆ ಮಳೆ ಇನ್ನೂ ಬಿಟ್ಟಿರಲಿಲ್ಲ.
ಮುಂಜಾನೆಯ ಚುಮು ಚುಮು ಚಳಿಯಲ್ಲಿ, ಬೆಚ್ಚನೆಯ ಹಾಸಿಗೆಯ ಸುಖನಿದ್ರೆ ಆಗ ತಾನೇ ಮುಗಿದಿತ್ತು.

ಚಳಿಯಿಂದ ತಪ್ಪಿಸಿ ಕೊಳ್ಳಲೋ ಎಂಬಂತೆ ಒಲೆಯಲ್ಲಿ ಸೌದೆಗಳು ಬೆಂಕಿಯ ಮೊರೆಹೊಗಿದ್ದವು! ಹಂಡೆಯಲ್ಲಿ ಬೆಚ್ಚಗಿನ ನೀರು ಮರಗಟ್ಟಿದ್ದ ಕೈ-ಕಾಲುಗಳಿಗೆ ಮರುಜೀವ ನೀಡಿತ್ತು!
ಒಲೆಯಿಂದ ಹೊರಹೊಮ್ಮಿದ ತಿಳಿಹೊಗೆ , ಹಸಿರು ಹೊದ್ದ ಭೂಮಿಗೂ, ಕರಿಮೋಡಗಳನ್ನು ಹೊದ್ದ ಬಾನಿಗೂ ಸೇತುವೆಯನ್ನು ಕಟ್ಟಿತ್ತು!  ಬಿಸಿ ಬಿಸಿ ಕಾಫಿ ದಿನಕ್ಕೆ ಶುಭಾರಂಭ ಕೋರಿತ್ತು.



ಮಣ್ಣ ಕೊಳೆಯನ್ನ ತೊಳೆಯಲೋ ಎಂಬಂತೆ ಧೋ ಎಂದು ಮಳೆ ಸುರಿಯುತ್ತಿತ್ತು.
ಕೊತ-ಕೊತ ಕುದಿಯುವ ನೀರಿನ ಅಭ್ಯಂಜನ ಮೈ-ಮನಗಳ ಕೊಳೆಯನ್ನ ತೊಳೆದು ,ಹೊಸ ಹುರುಪನ್ನು ಮೂಡಿಸಿತ್ತು!

ಹೊರಗೆ , ಮುಂಗಾರ ಮೋಡಗಳ ಗೋಡೆಯನ್ನ ಸೀಳಿ , ಭೂಮಿಯನ್ನ ಮುತ್ತಿಡಲು ಸೂರ್ಯರಶ್ಮಿಗಳ ಅವಿರತ ಪ್ರಯತ್ನ ಸೋತಿತ್ತು. ಮಳೆ ಒಂದೇ ಸಮನೆ ಶ್ರುತಿ ಹಿಡಿದು ಹಾಡಿತ್ತು.
ಒಣಗಿ ಮೂಲೆ ಹಿಡಿದಿದ್ದ ಬಣ್ಣ ಬಣ್ಣದ ಛತ್ರಿಗಳು ಮತ್ತೆ ತಮ್ಮ ತಲೆಯನ್ನೆತ್ತಿದ್ದವು. ಕಂಬಳಿ-ಗೊರಬುಗಳು ಮತ್ತೆ ಮಳೆಗೆ ಮೈಒಡ್ಡಿದ್ದವು!
ಮಳೆಗಾಲದ ಚಟುವಟಿಕೆಗಳು ಬಸವನಹುಳುವಿನ ವೇಗದಲ್ಲಿ ಚಲಿಸಿತ್ತು !

ನೀರು , ಹಸಿರು ಸಂತೋಷವನ್ನು ತಂದಿತ್ತು . ಬರಿಗಾಗಿದ್ದ ಭೂತಾಯಿಯ ಮಡಿಲು ಮತ್ತೆ ತುಂಬಿತ್ತು. 
ಭೂಮಿಗೆ ಸ್ವರ್ಗವೇ ಇಳಿದಿತ್ತು ! ಗೊಂದಲಮಯ ಬದುಕಿನಲ್ಲಿ ಹೊಸ ಉತ್ಸಾಹ ತಲೆಎತ್ತಿತ್ತು. ಸಮೃದ್ದಿ ಚಿಮ್ಮಿತ್ತು.

ಕೆಸು, ಕಳಲೆ, ಹಲಸಿನ ಘಮ ಮಳೆ ಮಾರುತದಲ್ಲಿ ಬೆರೆತು ಹೋಗಿತ್ತು.
ಶಾಂತವಾಗಿ ಹನಿಯುತ್ತಿದ್ದ ಹೂಮಳೆ,ಮಧ್ಯಾಹ್ನ್ನದ ನಿದ್ರೆಗೆ ಲಾಲಿ ಹಾಡಿತ್ತು .



ಎಚ್ಚೆತ್ತ ಮನದಲ್ಲಿ, ಅದೇನೋ ಏಕಾಂತ ಕಾಡಿತ್ತು. ಚಾವಡಿಯಲ್ಲಿ ಕೂತು, ಯಾರದೋ ಬರವಿಗೆ ಬಾಗಿಲು ಕಾದಿತ್ತು.
ಆಗ ತಾನೇ ಕರಿದ ಹಲಸಿನ ಹಪ್ಪಳ , ಸಂಜೆಯ ಒಂಟಿತನಕ್ಕೆ ಜೊತೆ ನೀಡಿತ್ತು !

ಕತ್ತಲೆಯ ಹೊದಿಕೆ ಬಾನ್-ಭುವಿಗಳನ್ನು ಒಂದಾಗಿಸಿತ್ತು .
ಹತ್ತಾರು ಬಗೆಯ ಹುಳಗಳು , ದೀಪದ ಬೆಳಕಿಗೆ ಸೆಳೆದು, ಮೈ ಸುಟ್ಟುಕೊಂಡಿದ್ದವು.

ದಿನವಿಡೀ ಸುರಿದ ಮಳೆ, ಸ್ವಲ್ಪ ಹೊತ್ತಿನಿಂದ ತನ್ನ ಹಾಡಿಗೆ ವಿರಾಮ ಕೊಟ್ಟಿತ್ತು.
ಅರೆ ಕ್ಷಣ ಮೂಡಿದ ನೀರವ ಮೌನ  ನೂರಾರು ಜೀರುಂಡೆಗಳ ಕೂಗಿಗೆ ನಲುಗಿತ್ತು .
ಅದನ್ನು ಸಹಿಸಲಾರದೆ ಬಾನು ಗುಡುಗಿತ್ತು.
ಮಳೆ ಮತ್ತೆ ತನ್ನ ರಾಗವನ್ನು ಹಾಡಿತ್ತು....

Monday, April 9, 2012

The Bucket list :)

Inspired by the Wandering soul 's new post
 and dear friend pummy's post , I decided to prepare my own list.
Yesterday night  I was traveling from my native and the cool breeze-from my window,  after the first rains triggered this thought and i started noting it down my mobile ..

The list does not cover the regular job-money related things but things that I want to learn/experience/enjoy :) And it is not final ,and always subjected to the time :P

Here's the list !

1. Harvest Honey and eat the purest honey!
2. Take part in "ಸಸಿ ನೆಟ್ಟಿ" during Monsoons.
3. Camp on the base of a waterfall listening to the roaring sounds all night !
4. Camp on a lonely beach ! 
5. Catch a big fish in a remote lake.
6. Stay in a village deep inside the western ghat for a month, live their life,disconnect from the world!
7.  Plant a mango tree, watch it growing ,eat the sweetest mango :)
8. Do real solo travel!
9. A long ride in the cycle under the full moon :)
10. Learn Havyaka language !
11. Take part in a tribal dance
12. Take Mud bath:D
13. Watch the baby birds grow up  in front of my eyes!!!
14. Ride a 4x4 in the western ghats in the Monsoons
15. Wake up on a mountain top to see the Sun rising out of the ocean of clouds.


Some of the items may look trivial ,but its "my" list and as the Bond says "These simple things in life are best"!

What do you say?  :)

Monday, March 19, 2012

ಬಾಗಿಲೊಳು ಕೈಮುಗಿದು...

ಬಾಗಿಲೊಳು ಕೈಮುಗಿದು
  ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು
ಕಲೆಯ ಬಲೆಯು 



 ಕಂಬನಿಯ ಮಾಲೆಯನು
ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳ
ಅರ್ಪಿಸಿಲ್ಲಿ
 
ಗಂಟೆಗಳ ದನಿಯಿಲ್ಲ
ಜಾಗಟೆಗಳಿಲ್ಲಿಲ್ಲ 
 ಕರ್ಪೂರದಾರತಿಯ
ಜ್ಯೋತಿಯಿಲ್ಲ 
 ಭಗವಂತನಾನಂದ ರೂಪಗೊಂಡಿಹುದಿಲ್ಲಿ 
 ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ

ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ
ಬಾದರಾಯಣನಂತೆ ಭಾರತವು ಹಾಡುತಿಹುದಿಲ್ಲಿ
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ
ಮೂರ್ಛೆಯಲಿ ಮೈಮರೆತು ತೇಲುವುದು ಭೂಭಾರವಿಲ್ಲಿ
- ಕುವೆಂಪು
 


 

Saturday, March 10, 2012


                 ರಸಋಷಿಗೆ ನಮನ !    
 
ಕುವೆ೦ಪು ಅವರ "ಮಲೆನಾಡಿನ ಚಿತ್ರಗಳು" ಪುಸ್ತಕ ಓದಿದಂದಿನಿಂದ ನಾನು ಅವರ ಫ್ಯಾನ್ :)
ಮಲೆಗಳಲ್ಲಿ ಮದುಮಗಳು  ಕಾದಂಬರಿಯನ್ನು ಮತ್ತೊಮ್ಮೆ ಓದುವ ಆಸೆ ಬಹಳ ಕಾಡ್ತಾ ಇತ್ತು.. ಇವತ್ತು ಶುರು ಮಾಡಿದೀನಿ ಮತ್ತೊಂದ್ ಸಾರ್ತಿ ಓದಕೆ.. ಮೊದಲನೇ ಪುಟದಲ್ಲಿ ಓದುಗರಿಗೆ ಕೊಟ್ಟಿರುವ ಈ ಸಂದೇಶ, ಎಂಥ ಅರ್ಥಪೂರ್ಣ! ಮಲೆನಾಡಿನ ಬದುಕನ್ನು ಬಿ೦ಬಿಸುವ ಈ ಪುಟ್ಟ ಕವನವನ್ನ ಹಂಚಿಕೊಳ್ಳೋ ಆಸೆ ಆಯ್ತು.. ಓದಿ, ಆನ೦ದಿಸಿ ;)

ಇಲ್ಲಿ
        ಯಾರೂ ಮುಖ್ಯರಲ್ಲ;
                ಯಾರೂ ಅಮುಖ್ಯರಲ್ಲ;
                        ಯಾವುದೂ ಯಃಕಶ್ಚಿತವಲ್ಲ!

ಇಲ್ಲಿ
        ಯಾವುದಕ್ಕೂ ಮೊದಲಿಲ್ಲ;
                ಯಾವುದಕ್ಕೂ ತುದಿಯಿಲ್ಲ;
                        ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ;
                                ಕೊನೆಮುಟ್ಟುವುದೂ ಇಲ್ಲ !


ಇಲ್ಲಿ
        ಅವಸರವೂ ಸಾವಧಾನದ ಬೆನ್ನೇರಿದೆ!

ಇಲ್ಲಿ
        ಎಲ್ಲಕ್ಕೂ ಇದೆ ಅರ್ಥ;
                ಯವುದೂ ಇಲ್ಲ ವ್ಯರ್ಥ;
                        ನೀರೆಲ್ಲವೂ ತೀರ್ಥ !!