Wednesday, March 6, 2013

ಚಾರಣದ ಹಾದಿ

ದೂರ ದಿಗಂತಕ್ಕೆ ಮೆಟ್ಟಿಲಾಗಿ ನಿಂತ ಗಿರಿಶೃಂಗ .
ಮುಂದೆ ಸಾಗಿದಷ್ಟೂ ದೂರ ಬರುವ ಕಾಡಹಾದಿ ..

ಅಕಾಲಿಕ ಮಳೆಯ ಮುದ್ದಿನಿಂದ ಚಿಗುರೊಡೆದ ಹಸಿರು .
ಸೂರ್ಯನ ಆರ್ಭಟ ,ಬೆವರಿನ ಹನಿಯನ್ನೊರೆಸಲು ಬೀಸುವ ತಂಗಾಳಿ ..

ಬಾನೆತ್ತರಕ್ಕೆ ನಿಂತ ಅಸೀಮ , ಅನಂತ ಪರ್ವತಸಾಲುಗಳು ..
ಆ ಎಲ್ಲೆಯನು ಮೀರಿ ಹಾರೋ ಒಂಟಿ ಹಕ್ಕಿಯ ಧೀರ ಗಾಂಭೀರ್ಯ ..
ಗೊತ್ತು ಗುರಿಯಿಲ್ಲದೆ ಅಲೆಯುವ ಒಂಟಿ ಮೋಡ ...

ಬೇಸಿಗೆಯ ಬೇಗೆಯಲ್ಲೂ ಬಿಸಿಲು ಕಾಣದ ದಟ್ಟ ಕಾನನ .
ಕಾಡಿನ ಹೃದಯವನ್ನು ಸೀಳಿ ಮುನ್ನುಗ್ಗುವ ತೊರೆ..
ನೀರವ ಮೌನ ಮುರಿಯುವ ಮಡಿವಾಳಗಳ ಉಲಿ...

ಪ್ರತಿ ಹೆಜ್ಜೆಯಲ್ಲೂ ಮೂಡುವ ಹೊಸತನ ..
ಮುಖದಿ ನಗೆ ಮೂಡಿಸೋ ಹಳೆಯ ನೆನಪುಗಳು..
ಮುಗಿಯದ ಕಾಡು ಹರಟೆಗಳು, ಮುರಿಯದ  ಗೆಳೆತನ ...

ಹೊಸ ಹುರುಪು ,ಅನುಭವದೊಡನೆ ಕಾಡಿನಿಂದ ಮರಳಿ ಮರೆಯಾದ ನೆಮ್ಮದಿ .
ಹಿಂದಿರುಗಿ ನೋಡಿದಾಗ ಕಾಣುವ ಸವೆದ ಹಾದಿ ... 
ಮತ್ತೆ ಮತ್ತೆ ಕಾಡುವ ಹಾದಿ , ಚಾರಣದ  ಹಾದಿ !